ದಾಖಲೆ ಇಲ್ಲದ ₹ 5.35 ಲಕ್ಷ ಹಣ ಜಫ್ತಿ

Share and Enjoy !

Shares
Listen to this article

ಸಿರುಗುಪ್ಪ : ರಾಷ್ಟ್ರೀಯ ರಾಜ್ಯ ಹೆದ್ದಾರಿ 150 ಎ ರ ತಾಲ್ಲೂಕು ಗಡಿ ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ಮಾಡುವಾಗ ದಾಖಲೆ ಇಲ್ಲದ ₹ 5ಲಕ್ಷ 35ಸಾವಿರ  ನಗದು ಹಣ ಬುಧವಾರ ಜಫ್ತಿ ಮಾಡಲಾಗಿದೆ.

ತಾಲ್ಲೂಕಿನ  ಇಬ್ರಾಹಿಂಪುರ ಗ್ರಾಮದ ಬಳಿ  ಇರುವ ಚೆಕ್ ಪೋಸ್ಟ್ ನಲ್ಲಿ ಸಿಂಧನೂರು ತಾಲ್ಲೂಕಿನಿಂದ ಮಾರುತಿ ಸುಜುಕಿ ಕಾರಿನ ಚಾಲಕ ಜಿ.ರಮೇಶ ಅವರು ₹ 5 ಲಕ್ಷ 35 ಸಾವಿರ ಹಣ ತೆಗೆದುಕೊಂಡು ಹೋಗತ್ತಿದ್ದರು. ಸೂಕ್ತ ದಾಖಲೆ ಇಲ್ಲದ ಕಾರಣ ಪೊಲೀಸರು ವಶಕ್ಕೆ ಪಡೆದು ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು

ಪಿಎಸ್ಐ ಕೆ.ರಂಗಯ್ಯ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ

Share and Enjoy !

Shares