ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಯುವ ಉದ್ಯಮಿ ನಾರಾ ಭರತ್ ರೆಡ್ಡಿ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಖಾಸಗಿ ಕಚೇರಿಯೊಂದನ್ನು ಆರಂಭಿಸಿದ್ದು, ಸದರಿ ಕಚೇರಿಯಲ್ಲಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ಮೂಲಕ ವಿದ್ಯುಕ್ತವಾಗಿ ಕಾರ್ಯಾರಂಭ ಮಾಡಲಾಯಿತು.
ಗಾಂಧಿನಗರದ ಮೋಕಾ ರಸ್ತೆಯಲ್ಲಿರುವ ಅವರ ಒಡೆತನದ ಶ್ರೀರಾಘವೇಂದ್ರ ಎಂಟರಪ್ರೈಜಸ್ ಕಚೇರಿಯ ಪಕ್ಕದ ಜಾಗದಲ್ಲಿ ಈ ಕಚೇರಿ ಆರಂಭಿಸಲಾಗಿದ್ದು. ತಮ್ಮನ್ನು ಭೇಟಿ ಆಗಲು ಬರುವ ಸಾರ್ವಜನಿಕರು ಇಲ್ಲಿ ಸಂದರ್ಶಿಸಬಹುದೆಂದು ತಿಳಿಸಿದ್ದಾರೆ.
ಈ ಪೂಜಾ ಸಂದರ್ಭ ನಾರಾ ಭರತ್ ರೆಡ್ಡಿ ಹಾಗೂ ಅವರ ಆಪ್ತರು ಭಾಗಿಯಾಗಿದ್ದರು.