ಬಳ್ಳಾರಿ :ಕಾರು ಲೇಔಟ್ ಗೆ ಡಿಕ್ಕಿ, ನುಜ್ಜುಗುಜ್ಜಾದ ಕಾರು. 15 ಕ್ಕಿಂತ ಹೆಚ್ಚು ಯುವಕರು ರಸ್ತೆಯಲ್ಲಿ ತೇಲಾಟ.
ಗಣಿನಾಡು ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯಲ್ಲಿ ನಿನ್ನೆ ರಾತ್ರಿ10 ಗಂಟೆ 30 ನಿಮಿಷ ಸಮಯದಲ್ಲಿ ಕೆಲ ಕಾಲೇಜಿನ ವಿದ್ಯಾರ್ಥಿಗಳು ಅತಿವೇಗವಾಗಿ ಕಾರನ್ನು ಚಾಲಾಯಿಸಿಕೊಂಡು ಬಂದು ರೋಡ್ ಹಂಸ್ ತಪ್ಪಿಸಲು ಹೋಗಿ ಲೇಔಟ್ ಡಿಕ್ಕಿ ಹೊಡೆದು, ಹೇರ್ ಬ್ಯಾಗ್ ಒಪನ್ ಆಗಿ, ಇಬ್ಬರ ಜೀವ ಉಳಿದ ಘಟನೆ ನಡೆದಿದೆ.
ಅತಿವೇಗವಾಗಿ ಬಂದ ಕಾರು ಲೇಔಟ್ ಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನಲ್ಲಿ ನಿಂತಿತ್ತು. ಕಾರಿನ ಮುಂಭಾಗ ನುಜ್ಜುಗುಜ್ಜಾಗಿತ್ತು. ಪೆಟ್ರೋಲ್ / ಡೀಸೆಲ್ ಹೊರಗಡೆ ಸೋರುತ್ತಿತ್ತು. ಕಾರಿನಲ್ಲಿ ನ ಹೇರ್ ಬ್ಯಾಗ್ ಒಪನ್ ಆದ ಕಾರಣ ಕಾರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಜೀವ ಉಳಿಸಿಕೊಂಡಿದ್ದಾರೆ. ಇನ್ನು ಡಿಕ್ಕಿ ಹೊಡೆದ ತಕ್ಷಣ ಈ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದ ಜನರು ಈ ಇಬ್ಬರು ವಿದ್ಯಾರ್ಥಿಗಳಿಗೆ ಕಾರಿನಿಂದ ಹೊರಗಡೆ ಹಾಕಿದ್ದಾರೆ.
ಇನ್ನು ಸ್ಥಳೀಯರು ಈ ವಿದ್ಯಾರ್ಥಿಗಳಿಗೆ ಯಾರು ? ನೀವು ಎಂದು ಕೇಳಿದರೇ ಉತ್ತರಿಸದೆ, ನಮಗೆ ಏನು ಆಗಿಲ್ಲ ಎಂದು ಫುಲ್ ಎಣ್ಣೆ ಹೊಡೆದ ಮೂಡ್ ನಲ್ಲಿ ಯುವಕರು ಮಾತನಾಡುತ್ತಿದ್ದರು. ಕೆಲ ಕ್ಷಣಗಳಲ್ಲಿ 15 ಕ್ಕಿಂತ ಹೆಚ್ಚಿನ ಯುವಕರು ಎರಡು ಮೂರು ಕಾರುಗಳು, ಐದಾರು ಬೈಕ್ ಗಳಲ್ಲಿ ಬಂದು, ಅಪಘಾತ ಕಾರನ್ನು ಹಿಂದಕ್ಕೆ ಸರಿಸುವ, ಕಾರಿನ ನಂಬರ್ ಪ್ಲೆಟ್ ತೆಗೆದುಹಾಕಿದ ಘಟನೆಗಳ ನಡೆದವು. ಇನ್ನು ಪೊಲೀಸರು ಸ್ಥಳಕ್ಕೆ ಬಂದಾಗ ಇಲ್ಲ ಸರ್ ಕಾರು ಓಡಿಸಿದನು ಓಡಿಹೋಗಿದ್ದಾನೆ, ನಾನು ಅದರಲ್ಲಿ ಇರಲಿಲ್ಲ ಎನ್ನುವ ಸುಳ್ಳು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು. ಕಾರ ನಂಬರ್ ( ಕೆ.ಎ 02 ಎಂ.ಎಲ್ 3041).
ಘಟನೆ ನಡೆದ ಸ್ಥಳಕ್ಕೆ 112 ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಟ್ರಾಫೀಕ್ ಕಾಣೆಯ ಸಿಬ್ಬಂದಿಗಳು ಆಗಮಿಸಿದ್ದರು.
ಪೊಲೀಸರ ಕಠಿಣ ಕ್ರಮ ಅಗತ್ಯ:
ವಿದ್ಯಾರ್ಥಿಗಳು,ಯುವಕರು ಕಪ್ಪಗಲ್ಲು ರಸ್ತೆಯಿಂದ ಹಿಡಿದು, ಡ್ರಿಮ್ ವರ್ಲ್ಡ್, ಅರ್ಚನ ಲೇಔಟ್, ಡೆಲ್ಲಿ ಶಾಲೆ , ಸತ್ಯಂ ಇಂಟರ್ ನ್ಯಾಷನಲ್, ಸಿರಿವಾರ, ಕಪ್ಪಗಲ್ಲು ಮಾರ್ಗದಲ್ಲಿ ಇರುವ ಅನೇಕ ಲೇಔಟ್ ಗಳಲ್ಲಿ ಒಳಗೆ ಮತ್ತು ಹೊರಗಡೆ ಇರುವ ವಿಶಾಲವಾದ ಪ್ರದೇಶದಲ್ಲಿ ಸಂಜೆ ಆದ್ರೇ ಸಾಕು ಕೆಲ ಕಾಲೇಜಿನ ವಿದ್ಯಾರ್ಥಿಗಳು, ಯುವಕರು ಕಾರುಗಳು, ಬೈಕ್ ಗಳು ಹಾಕಿಕೊಂಡು ಪಾರ್ಟಿ ಮಾಡಲು ಬರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇವರ ವಿರುದ್ದ ಪೊಲೀಸ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ತಿಳಿಸಿದರು.
ಬಾಕ್ಸ್ ಹಾಕಿ: ಹಂಸ್ ಹಾಕಿದ ಮಾಲೀಕನ ವಿರುದ್ಧ ಕ್ರಮ :
ಈ ರಸ್ತೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಲೇಔಟ್ ನ ಜನರು ಪ್ರತಿನಿತ್ಯ ಓಡಾಟ ಮಾಡುತ್ತಾರೆ. ಆದ್ರೇ
ಕಪ್ಪಗಲ್ಲು ರಸ್ತೆಯ ಕೆಲ ಲೇಔಟ್ ಮುಂದೆ ಹಂಸ್ ಗಳನ್ನು ಹಾಕಿ ವಾಹನ ಸವಾರ ಅಪಘಾತಕ್ಕೆ ಗುರಿಯಾಗುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ಹಾಗೇಯೇ ನಿನ್ನೆ ರಾತ್ರಿ ಮಧ್ಯಪಾನ ಮಾಡಿ ಓವರ್ ಸ್ಪೀಡ್ ಬಂದು, ಲೇಔಟ್ ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಈ ಸಮಯದಲ್ಲಿ ಯಾರಾದ್ರೂ ಎದುಗುಗಡೆ ಬಂದಿದ್ದರೇ ಅನಾಹುತವಾಗಿ ಸಾವು ಸಹ ಸಂಬವಿಸುತ್ತಿತು. ಇನ್ನು ಲೇಔಟ್ ಹೊರಗಡೆ ಕಾವಲು ಕಾಯುವ ದಂಪತಿಯ ಮೇಲೆ ಕಾರು ಹಿಟ್ ಅಂಡ್ ರನ್ ಆಗುವ ಸಾಧ್ಯತೆ ಇತ್ತು. ಅವರು ಸಹ 20 ಅಡಿಗಳಲ್ಲಿ ಬಚಾವ್ ಆಗಿದ್ದಾರೆ. ಅವರಿಗೆ ಮರು ಜನ್ಮ ಬಂದಾಂತಾಗಿದೆ.
ಒಟ್ಟಾರೆಯಾಗಿ ಈ ಕಾಲೇಜು ವಿದ್ಯಾರ್ಥಿಗಳು, ಯುವಕರು ಈ ಮೋಜು, ಮಸ್ತಿಗಳಿಗೆ ಕಡಿವಾಣವನ್ನು ಬಳ್ಳಾರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ ಇಲಾಖೆ ಮಾಡಬೇಕಿದೆ ಎನ್ನುವುದು ನಮ್ಮ ಆಸೆಯ.