ಬಳ್ಳಾರಿ :ಬಳ್ಳಾರಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ಸತ್ಯಂ ಬಿ.ಎಡ್ ಕಾಲೇಜಿನ ನೇತೃತ್ವದಲ್ಲಿ ಇಂದು ದತ್ತಿ ಕಾರ್ಯಕ್ರಮವನ್ನು ಪುರುಷೋತ್ತಮ ಗೌಡ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಕೆ.ವಿ ನಾಗರೆಡ್ಡಿ ಮಾತನಾಡಿದ ಅವರು
ದತ್ತಿ ಎಂದರೆ ದಾನ, ಎಫ್.ಡಿ ಇಟ್ಟ ಹಣದಲ್ಲಿ ಬಂದ ಬಡ್ಡಿಯ ಆಧಾರವಾಗಿ ಇಟ್ಟುಕೊಂಡು ಈ ಕಾರ್ಯಕ್ರಮ ಮಾಡಲಾಗಿದೆ. ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಇರುವ ದತ್ತಿ ನೀಡುವ ದಾನಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಹೆಚ್ಚಿನ ಕಾರ್ಯಕ್ರಮಗಳನ್ನು ವೃತ್ತಿ ಪರತೆಯ ಸಂಸ್ಥೆಗಳಲ್ಲಿ ಮಾಡುತ್ತೇವೆ ಎಂದರು. ಎಲ್ಲಾ ಪ್ರಶಿಕ್ಷಾರ್ಧಿಗಳು ಅಜೀವ ಸದಸ್ಯತ್ವವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಉದ್ಘಾಟನೆ ಮಾಡಿ ಮಾತನಾಡಿದ ಅವರು ಪುರುಷೋತ್ತಮ ಗೌಡ ಮಾತನಾಡಿದ ಅವರು ತುಂಗಭದ್ರಾ ಜಲಾಶಯ ಬಗ್ಗೆ ಸಂಕ್ಷಿಪ್ತ ವಾಗಿ ಮಾಹಿತಿಯನ್ನು ನೀಡಿದರು. ಬಳ್ಳಾರಿ ಜಿಲ್ಲೆಯಲ್ಲಿ ಮೆಣಸಿನಕಾಯಿ, ಹತ್ತಿ, ಭತ್ತ ಇನ್ನಿತರ ಬೆಳೆಗಳ ಮಾಹಿತಿಯನ್ನು ನೀಡಿದರು.
ಈ ಸಮಯದಲ್ಲಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ, ಚಂದ್ರಶೇಖರ್ ಆಚಾರಿ, ಸತ್ಯಂ ಬಿಡ್ ಕಾಲೇಜಿನ ಪ್ರಾಂಶುಪಾಲ ಡಾ.ಅಶ್ವರಾಮು, ಹಿರಿಯ ತೋಗಲುಗೊಂಬೆ ಕಲಾವಿದ ಬೆಳಗಲ್ ವೀರಣ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಕೆ.ವಿ ನಾಗರೆಡ್ಡಿ , ಕಾರ್ಯದರ್ಶಿ ಕಾರ್ತಿಕ್ ಮರಿಸ್ವಾಮಿ ಮಠ, ಎರಿಸ್ವಾಮಿ, ವಿರೇಶ್ ಸ್ವಾಮಿ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.