ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

Share and Enjoy !

Shares
Listen to this article

ಬೆಂಗಳೂರು:ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಬಿಡುಗಡೆಯಾಗಿದೆ. ಇದುವರೆಗೂ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಇನ್ನೂ 58 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಕೋಲಾರದಲ್ಲಿ ಟಿಕೆಟ್‌ ಘೋಷಣೆಯಾಗಿಲ್ಲ, ಮೇಲುಕೋಟೆಯಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಲಾಗಿದೆ.

ಇನ್ನೂ, ಎರಡನೇ ಪಟ್ಟಿಯಲ್ಲಿಯೂ ಕೋಲಾರ ಅಭ್ಯರ್ಥಿ ಘೋಷಣೆಯಾಗಿಲ್ಲ. ಸಿದ್ದರಾಮಯ್ಯ ವರುಣಾ ಜೊತೆ ಕೋಲಾರದಲ್ಲೂ ಸ್ಪರ್ಧೆ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಕೋಲಾರ ಟಿಕೆಟ್ ಘೋಷಣೆ ಮಾಡದೆ‌‌ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದ ವೈ ಎಸ್ ವಿ ದತ್ತಾ ಅವರು ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಅವರಿಗೆ ಟಿಕೆಟ್ ನೀಡಿಲ್ಲ. ಬದಲಾಗಿ ಆನಂದ್ ಕೆಎಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಆಪ್ತ ವೈಎಸ್ ವಿ ದತ್ತಾ ಅವರಿಗೆ ಟಿಕೆಟ್ ಕೈತಪ್ಪಿದೆ.

ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಈ ಬಾರಿಯೂ ಘೋಷಣೆ ಆಗಿಲ್ಲ. ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ನೀಡಲು ವಿರೋಧ ಇದೆ. ಈ‌ ಹಿನ್ನೆಲೆಯಲ್ಲಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇರಲಿಲ್ಲ. ಟಿಕೆಟ್ ಘೋಷಣೆ ಆಗದ ಹಿನ್ನೆಲೆಯಲ್ಲಿ ಅವರು ಜಮೀರ್ ಅಹ್ಮದ್ ಖಾನ್ ಮೂಲಕ ಸಾಕಷ್ಟು ಲಾಬಿ ನಡೆಸಿದ್ದರು. ಆದರೆ, ಎರಡನೇ ಪಟ್ಟಿಯಲ್ಲೂ ಅಖಂಡ ಶ್ರೀನಿವಾಸ್ ಮೂರ್ತಿ ಹೆಸರು ಕಾಣಿಸಿಕೊಂಡಿಲ್ಲ. ಜೊತೆಗೆ ಲಿಂಗಸುಗೂರಿನ ಹಾಲಿ ಶಾಸಕ ಡಿಎಸ್‌ ಹುಲಗೇರಿ, ಹರಿಹರ ಕ್ಷೇತ್ರದ ಹಾಲಿ ಶಾಸಕ ರಾಮಪ್ಪ, ಕುಂದಗೋಳದ ಹಾಲಿ ಶಾಸಕಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್‌ ಘೋಷಣೆ ಆಗಿಲ್ಲ.

ಸಾಕಷ್ಟು ಕುತೂಹಲ ಕೆರಳಿಸಿದ್ದ ಧಾರವಾಡ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದೆ. ವಿನಯ್ ಕುಲಕರ್ಣಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಅವರಿಗೆ ಇದೀಗ ಧಾರವಾಡದಲ್ಲಿ ಟಿಕೆಟ್ ನೀಡಲಾಗಿದ್ದು, ಗೊಂದಲಗಳಿಗೆ ತೆರೆ ಎಳೆಯಲಾಗಿದೆ.

 

ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಈ ಬಾರಿಯೂ ಘೋಷಣೆ ಆಗಿಲ್ಲ. ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ನೀಡಲು ವಿರೋಧ ಇದೆ. ಈ‌ ಹಿನ್ನೆಲೆಯಲ್ಲಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇರಲಿಲ್ಲ. ಟಿಕೆಟ್ ಘೋಷಣೆ ಆಗದ ಹಿನ್ನೆಲೆಯಲ್ಲಿ ಅವರು ಜಮೀರ್ ಅಹ್ಮದ್ ಖಾನ್ ಮೂಲಕ ಸಾಕಷ್ಟು ಲಾಬಿ ನಡೆಸಿದ್ದರು. ಆದರೆ, ಎರಡನೇ ಪಟ್ಟಿಯಲ್ಲೂ ಅಖಂಡ ಶ್ರೀನಿವಾಸ್ ಮೂರ್ತಿ ಹೆಸರು

ಕಾಣಿಸಿಕೊಂಡಿಲ್ಲ. ಜೊತೆಗೆ ಲಿಂಗಸುಗೂರಿನ ಹಾಲಿ ಶಾಸಕ ಡಿಎಸ್‌ ಹುಲಗೇರಿ, ಹರಿಹರ ಕ್ಷೇತ್ರದ ಹಾಲಿ ಶಾಸಕ ರಾಮಪ್ಪ, ಕುಂದಗೋಳದ ಹಾಲಿ ಶಾಸಕಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್‌ ಘೋಷಣೆ ಆಗಿಲ್ಲ.

 

ಕಾಂಗ್ರೆಸ್ಅಭ್ಯರ್ಥಿಗಳ 2ನೇ ಪಟ್ಟಿ!
1. ನಿಪ್ಪಾಣಿ – ಕಾಕಾಸಾಹೇಬ್‌ ಪಾಟೀಲ್
2. ಗೋಕಾಕ್‌ – ಮಹಂತೇಶ್‌ ಕಡಾಡಿ
3. ಕಿತ್ತೂರು – ಬಾಬಾಸಾಹೇಬ್‌ ಬಿ.ಪಾಟೀಲ್
4. ಸೌದತ್ತಿ ಯಲ್ಲಮ್ಮ- ವಿಶ್ವಾಸ್‌ ವಸಂತ್‌ ವೈದ್ಯ
5. ಮುಧೋಳ (ಎಸ್‌ಸಿ)- ರಾಮಪ್ಪ ಬಾಲಪ್ಪ ತಿಮ್ಮಾಪುರ
6. ಬೀಳಗಿ- ಜೆ.ಟಿ. ಪಾಟೀಲ್
7. ಬಾದಾಮಿ- ಭೀಮಸೇನ್‌ ಬಿ. ಚಿಮ್ಮನಕಟ್ಟಿ
8. ಬಾಗಲಕೋಟೆ – ಹುಲ್ಲಪ್ಪ ವೈ. ಮೇಟಿ
9. ಬಿಜಾಪುರ ನಗರ- ಅಬ್ದುಲ್‌ ಹಮೀದ್‌ ಖಾಜಾಸಾಹೇಬ್ ಮುಶ್ರಿಫ್
10. ನಾಗಠಾಣ (ಎಸ್‌ಸಿ)- ವಿಠ್ಠಲ ಕಟಕದೊಂಡ
11. ಅಫ್ಜಲ್‌ಪುರ – ಎಂ.ವೈ. ಪಾಟೀಲ್
12. ಯಾದಗಿರಿ- ಚನ್ನರೆಡ್ಡಿ ಪಾಟೀಲ್‌ ತುಣ್ಣೂರ್
13. ಗುರಮಿಠ್‌ಕಲ್‌- ಬಾಬುರಾವ್‌ ಚಿಂಚನಸೂರ
14. ಗುಲ್ಬರ್ಗ ದಕ್ಷಿಣ – ಅಲ್ಲಮಪ್ರಭು ಪಾಟೀಲ್
15. ಬಸವಕಲ್ಯಾಣ – ವಿಜಯ್ ಧರಂ ಸಿಂಗ್
16. ಗಂಗಾವತಿ – ಇಕ್ಬಾಲ್ ಅನ್ಸಾರಿ
17. ನರಗುಂದ – ಬಿಆರ್ ಯಾವಗಲ್
18. ಧಾರವಾಡ – ವಿನಯ್ ಕುಲಕರ್ಣಿ
19. ಕಲಘಟಗಿ-ಸಂತೋಷ್ ಎಸ್. ಲಾಡ್
20. ಶಿರಸಿ – ಭೀಮಣ್ಣ ನಾಯ್ಕ್
21. ಯಲ್ಲಾಪುರ – ವಿ.ಎಸ್.ಪಾಟೀಲ್
22. ಕೂಡ್ಲಿಗಿ (ಎಸ್‌ಟಿ) – ಡಾ ಶ್ರೀನಿವಾಸ್ ಎಂ.ಟಿ
23. ಮೊಳಕಾಲ್ಮೂರು (ಎಸ್‌ಟಿ)-ಎನ್.ವೈ. ಗೋಪಾಲಕೃಷ್ಣ
24. ಚಿತ್ರದುರ್ಗ – ಕೆ.ಸಿ.ವೀರೇಂದ್ರ (ಪಪ್ಪಿ)
25. ಹೊಳಲ್ಕೆರೆ (ಎಸ್‌ಸಿ)- ಆಂಜನೇಯ ಎಚ್
26. ಚೆನ್ನಗಿರಿ – ಬಸವರಾಜು ವಿ ಶಿವಗಂಗ
27. ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
28. ಉಡುಪಿ – ಪ್ರಸಾದ್‌ ರಾಜ್ ಕಾಂಚನ್
29. ಕಡೂರು – ಆನಂದ್ ಕೆ.ಎಸ್
30. ತುಮಕೂರು ನಗರ – ಇಕ್ಬಾಲ್ ಅಹ್ಮದ್
31. ಗುಬ್ಬಿ – ಎಸ್.ಆರ್.ಶ್ರೀನಿವಾಸ್
32. ಯಲಹಂಕ – ಕೇಶವ ರಾಜಣ್ಣ ಬಿ
33. ಯಶವಂತಪುರ – ಸ್.ಬೈರಾಜ್ ಗೌಡ
34. ಮಹಾಲಕ್ಷ್ಮಿ ಲೇಔಟ್ – ಕೇಶವಮೂರ್ತಿ
35. ಪದ್ಮನಾಭ ನಗರ- ವಿ.ರಘುನಾಥ ನಾಯ್ಡು
36. ಮೇಲುಕೋಟೆ – ಸರ್ವೋದಯ ಪಾರ್ಟಿಯ ದರ್ಷನ್ ಪುಟ್ಟಣ್ಣಯ್ಯಗೆ ಬೆಂಬಲ
37. ಮಂಡ್ಯ – ಪಿ ರವಿಕುಮಾರ್
38. ಕೃಷ್ಣರಾಜಪೇಟೆ- ಬಿ.ಎಲ್.ದೇವರಾಜ್
39. ಬೇಲೂರು-ಬಿ.ಶಿವರಾಮ್
40. ಮಡಿಕೇರಿ- ಡಾ.ಮಂತರ್ ಗೌಡ
41. ಚಾಮುಂಡೇಶ್ವರಿ-ಸಿದ್ದೇಗೌಡ
42. ಕೊಳ್ಳೇಗಾಲ (ಎಸ್‌ಸಿ) – ಎ.ಆರ್.ಕೃಷ್ಣಮೂರ್ತಿ

Share and Enjoy !

Shares