ಕೊಪ್ಪಳ: ದೇಶದಾದ್ಯಂತ ಹನುಮ ಜಯಂತಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಹನುಮನ ಜನ್ಮಸ್ಥಳವೆಂದು ಐಸಿಹಾಸಿಕ ಪಡೆದಿರುವ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಶ್ರೀರಾಮನ ಪರಮ ಭಕ್ತನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಹನುಮ ಜಯಂತಿಗೆ 41 ದಿನ ಮೊದಲು ಉತ್ತರ ಕರ್ನಾಟಕದ ಹಲವರು ಭಾಗಗಳಲ್ಲಿ ಭಕ್ತರು ಹನುಮ ಮಾಲೆ ಧರಿಸಿ ಇಂದು ಅದನ್ನು ವಿಸರ್ಜಿಸುತ್ತಾರೆ. ಅಂಜನಾದ್ರಿ ಬೆಟ್ಟದಲ್ಲಿ ಬೆಳಗ್ಗೆಯಿಂದಲೇ ಮಾಲೆ ಧರಿಸಿದ ಭಕ್ತರ ದಂಡನ್ನು ಕಾಣಬಹುದುದಿತ್ತು. ಅವರಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಕೂಡ ಒಬ್ಬರು. ಅವರೆಲ್ಲ ಬೆಟ್ಟದ ಮೇಲೆ ಹನುಮ ಮಾಲೆ ವಿಸರ್ಜಿಸಿದರು.