ಬಳ್ಳಾರಿ: ವಿಶ್ವಆರೋಗ್ಯ ದಿನಾಚರಣೆ ಅಂಗವಾಗಿ ಸಮುದಾಯದ ಸಹಭಾಗಿತ್ವ ಇದ್ದರೆ ಎಲ್ಲರಿಗೂ ಆರೋಗ್ಯ ಸಾಧ್ಯತೆ ಎಂದು ಡಾಕ್ಟರ್ ಶಗುಪ್ತ ಕರೆ ನೀಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗುಗ್ಗರಹಟ್ಟಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಈ ದಿನವೂ ಗರ್ಭಿಣಿಯರಿಗೆ ಹಾಗೂ ಸಾರ್ವಜನಿಕರಿಗೆ ಉನ್ನತ ಆರೋಗ್ಯ ಸೇವೆಯನ್ನು ಕೊಡುವ ನಿಟ್ಟಿನಲ್ಲಿ ಉಚಿತ ತಪಾಸಣೆ ಶಿಬಿರ ಹಾಗೂ FPAI ಬಳ್ಳಾರಿ ಶಾಖೆ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಸ್ಥೆಯ ವತಿಯಿಂದ ವಿಜಯಲಕ್ಷ್ಮಿ ಶಾಖ ವ್ಯವಸ್ಥಾಪಕರು ಕಾರ್ಯಕ್ರಮವನ್ನು ಉದ್ದೇಶಿಸಿ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಸಮುದಾಯದ ಭಾಗವಹಿಸಿ ಅತಿ ಅವಶ್ಯಕತೆ ಇದೆ ಹಾಗೆ ಕುಟುಂಬ ಯೋಜನಾ ಪದ್ಧತಿಯ ಬಗ್ಗೆ ವಿವರಿಸಿದರು, ಆದ್ದರಿಂದ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಆರೋಗ್ಯದ ಸೇವೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತದ ನಂತರ ಡಾಕ್ಟರ್ ಶಗುಪ್ತ ಮಾತನಾಡಿದ ಅವರು ನೆರೆದ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಜನಸಾಮಾನ್ಯರಿಗೆ ತಪಾಸಣೆಯನ್ನು ಮಾಡಿದರು.
- ಈ
ಕಾರ್ಯಕ್ರಮದಲ್ಲಿ FPAI ಸಿಬ್ಬಂದಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗೊಗ್ಗರು ಹಟ್ಟಿ ಸಿಬ್ಬಂದಿ ಉಪಸ್ಥಿತರಿದ್ದರು.