ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ…
ಸಿಂಧನೂರು: ಬಳಗಾನೂರು ಪೊಲೀಸ್ ಠಾಣೆಯ ಎಎಸ್ಐ ಕೋರ್ಟ್ ಕೆಲಸದ ನಿಮಿತ್ತ ಗುರುವಾರದಂದು ನಗರದ ಕೋರ್ಟ್ ಆವರಣದಲ್ಲಿ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ, ಕೋರ್ಟ್ ಕೆಲಸವನ್ನು ಮುಗಿಸಿಕೊಂಡು ಬರುವಷ್ಟರಲ್ಲಿ ಖದೀಮರು ಬೈಕ್ ನ್ನೆ ಕದ್ದಿರುವುದು ಬೆಳಕಿಗೆ ಬಂದಿದೆ. ಬೈಕ್ ಕಳೆದುಕೊಂಡ ಎಎಸ್ಐ ಶುಕ್ರವಾರದಂದು ತಹಶೀಲ್ದಾರರ ಕಛೇರಿ ಆವರಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಮ್ಮ ಬೈಕ್ ನ್ನು ಹುಡುಕುತ್ತಾ ಅಕ್ಕಪಕ್ಕದ ನೆರೆದ ಜನತೆಗೆ ಬೈಕ್ ಪೋಟೋವನ್ನು ಹಾಕುತ್ತಿರುವುದು ಕಂಡು ಬಂತು.