9.17 ಲಕ್ಷ ಮೌಲ್ಯದ ಚಿನ್ನಾಭರಣ, 39.51 ಲೀ. ಮದ್ಯ ವಶ: ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಿಪಾಟಿ ಮಾಹಿತಿ.

Share and Enjoy !

Shares
Listen to this article

ಬಳ್ಳಾರಿ:ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲೆಯಾದ್ಯಂತ ವಿವಿಧ ಚೆಕ್‌ ಪೋಸ್ಟ್ ಗಳಲ್ಲಿ  ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಗುರುವಾರ 161.71 ಗ್ರಾಂ ಚಿನ್ನ ರೂ.8.99 ಲಕ್ಷ, 66 ಗ್ರಾಂ ಬೆಳ್ಳಿ ಅಂದಾಜು ಮೌಲ್ಯ ರೂ.3 ಸಾವಿರ, 4 ಬಿಳಿ ರತ್ನ (ರೂ.15 ಸಾವಿರ ಮೌಲ್ಯ) ಸೇರಿ ಒಟ್ಟು 9.17 ಲಕ್ಷ ಮೌಲ್ಯದ ಚಿನ್ನಾಭರಣ, 39.51 ಲೀಟರ್ (ರೂ.18,492 ಬೆಲೆಯ) ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಿಪಾಟಿ ತಿಳಿಸಿದ್ದಾರೆ.

ಅಬಕಾರಿ ಇಲಾಖೆಯಿಂದ 35.28 ಲೀಟರ್ ಮದ್ಯ (ರೂ.16,847 ಬೆಲೆಯ) ಹಾಗೂ ಪೋಲೀಸ್ ಇಲಾಖೆಯಿಂದ 4.23 ಲೀಟರ್ (ರೂ.1,645 ಬೆಲೆಯ) ಮದ್ಯ ಸೇರಿದಂತೆ ಒಟ್ಟು 39.51 ಲೀಟರ್ ರೂ.18,492 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಒಟ್ಟು 43 ಫ್ಲೈಯಿಂಗ್ ಸ್ವ್ಯಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡ ಕೆಲಸ ನಿರ್ವಹಿಸುತ್ತಿವೆ.

ಚುನಾವಣೆ ಪ್ರಕ್ರಿಯೆಯಲ್ಲಿ ಇಲ್ಲಿಯವರೆಗೆ ಎಫ್‍ಎಸ್‍ಟಿ, ಎಸ್‍ಎಸ್‍ಟಿ ಹಾಗೂ ಪೋಲೀಸ್ ಇಲಾಖೆ ತಂಡಗಳು ದಾಖಲಿಸಿದ ಎಫ್‍ಐಆರ್ ಮತ್ತು ವಸೂಲಿ ಮಾಡಿದ ಒಟ್ಟು 5.80 ಲಕ್ಷ ರೂ.ಗಳನ್ನು ನ್ಯಾಯಾಲಯದ ನಿರ್ದೇಶನದಂತೆ ಚುನಾವಣಾ ಅಧಿಕಾರಿಗಳ ಸಮಕ್ಷಮದಲ್ಲಿ ಖಜಾನೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

9.17 ಲಕ್ಷ ಮೌಲ್ಯದ ಚಿನ್ನಾಭರಣ, 39.51 ಲೀ. ಮದ್ಯ ವಶ: ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಿಪಾಟಿ ಮಾಹಿತಿ.

ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲೆಯಾದ್ಯಂತ ವಿವಿಧ ಚೆಕ್‌ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಗುರುವಾರ 161.71 ಗ್ರಾಂ ಚಿನ್ನ ರೂ.8.99 ಲಕ್ಷ, 66 ಗ್ರಾಂ ಬೆಳ್ಳಿ ಅಂದಾಜು ಮೌಲ್ಯ ರೂ.3 ಸಾವಿರ, 4 ಬಿಳಿ ರತ್ನ (ರೂ.15 ಸಾವಿರ ಮೌಲ್ಯ) ಸೇರಿ ಒಟ್ಟು 9.17 ಲಕ್ಷ ಮೌಲ್ಯದ ಚಿನ್ನಾಭರಣ, 39.51 ಲೀಟರ್ (ರೂ.18,492 ಬೆಲೆಯ) ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಿಪಾಟಿ ತಿಳಿಸಿದ್ದಾರೆ.