ಬಿಜೆಪಿ ಪಕ್ಷ ತೊರೆದು ಶಾಸಕ ಬಿ.ನಾಗೇಂದ್ರ ಸಮ್ಮುಖದಲ್ಲಿ ಕೈಗೆ ಸೇರ್ಪಡೆಯಾದ ಬಿಜೆಪಿ ಮುಖಂಡರು

Share and Enjoy !

Shares
Listen to this article

ಬಳ್ಳಾರಿ :ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯ ಹಾಗೂ ದುರಾಡಳಿತಕ್ಕೆ ಬೇಸತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸಿರಿವಾರ ಗ್ರಾಮದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ತೊರೆದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಸಿರಿವಾರ ಗ್ರಾಮದ ನೂರಾರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಗೃಹ ಕಚೇರಿಗೆ ಆಗಮಿಸಿದರು.

ತದನಂತರ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸಿರಿವಾರ ಗ್ರಾಮ ಪಂಚಾಯತಿ ಸದಸ್ಯರಾದ ತಿಮ್ಮಯ್ಯ ಸಿರಿವಾರ ಗ್ರಾಮದ ಬಿಜೆಪಿ ಪಕ್ಷದ ಮುಖಂಡರಾದ ರಾಮಕೃಷ್ಣ, ಹೊನ್ನೂರ್ ಸ್ವಾಮಿ, ರಾಮಾಂಜನಿ, ಶ್ರೀನಿವಾಸ್, ವಿ.ಸುಧಾಕರ, ವಿ.ನೆಟಿಗೆಲ್ಲಪ್ಪ, ವಿ.ರಮೇಶ್, ಹನುಮಂತ, ರಾಮಣ್ಣ ಸೇರಿದಂತೆ ಇನ್ನೂ ಅನೇಕ ಬಿಜೆಪಿ ಮುಖಂಡರನ್ನು ತುಂಬು ಹೃದಯದಿಂದ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬಳಿಕ ಮಾತನಾಡಿದ ಮಾನ್ಯ ಶಾಸಕ ಬಿ.ನಾಗೇಂದ್ರ ಅವರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಹಳಷ್ಟು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ದಾರೆ. ಜನರ ಸೇವೆ ಮಾಡಲು ಆಸಕ್ತಿ ಇರುವವರು ಯಾರು ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಮುಖಂಡರು ನಾವು ಮಾನ್ಯ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ನಿಮ್ಮ ಬೆಂಬಲಕ್ಕಾಗಿ ಗ್ರಾಮದ ಬೆಳವಣಿಗೆಗಾಗಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಸೇರುವುದಾಗಿ ಹೇಳಿದರು.

ಈ ಸಮಯದಲ್ಲಿ ಗ್ರಾಮೀಣ ಶಾಸಕ ನಾಗೇಂದ್ರ ನಾನು ನಿಮ್ಮ ಆಶೀರ್ವಾದದಿಂದಲೇ ಶಾಸಕ ಆಗಿದ್ದು, ಸದಾ ನಿಮ್ಮ ಸೇವೆಗೆ ಬದ್ಧನಾಗಿರುತ್ತೇನೆ, ಮುಂಬರುವ ದಿನಗಳಲ್ಲಿ ಕೂಡ ನಿಮ್ಮ ಆಶೀರ್ವಾದ, ಪ್ರೀತಿ ನನ್ನ ಮೇಲೆ ಇದೇ ರೀತಿ ಇರಲಿ ಎಂದು ಮನವಿ ಮಾಡಿದರು.

ಈ ಸಮಯ ಸಿರಿವಾರ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಿ.ಶೇಖಲಿಂಗ, ಶರಣ, ಮರಿಲಿಂಗ,  ಎಚ್.ಮಲ್ಲಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರ್ ಸ್ವಾಮಿ, ಲೋಕರಾಜ್ ಸೇರಿದಂತೆ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Share and Enjoy !

Shares