ಬಳ್ಳಾರಿ :ಬಳ್ಳಾರಿ ನಗರದ ದೊಡ್ಡ ಮಾರ್ಕೆಟ್ ಹತ್ತಿರ ಇರುವ ಅಪ್ಪು ಸೇವಾ ಸಮಿತಿ ಕಛೇರಿಯ ಮುಂದೆ ಅಪ್ಪು ಸೇವಾ ಸಮಿತಿ ಸನ್ಮಾರ್ಗ ಗೆಳೆಯರ ಬಳಗ ಬಳ್ಳಾರಿ ವತಿಯಿಂದ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟಿಗಿಗೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಯೋಜನ ನಿರ್ದೇಶಕರಾದ ಪಿ ಪ್ರಮೋದ ಮನುಷ್ಯನಿಗೆ ದಾಹ ಎಷ್ಟು ಮುಖ್ಯವೋ ಚುನಾವಣೆಯಲ್ಲಿ ಮತದಾನ ಕೂಡ ಅಷ್ಟೇ ಮುಖ್ಯ ಅಂಗಾಗಿದೆ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ ಮತ್ತು ಗ್ರಾಮ ಪಂಚಾಯಿತಿಗಳು ಜೂತೆಗೆ ಸಂಘ ಸಂಸ್ಥೆಗಳ ಕೂಡ ಸಹಕಾರಿಸಬೇಕು ಎಂದರು.
ಡಾ ಪುನೀತ್ ರಾಜಕುಮಾರ್ ಮಾತಿನಂತೆ ನಮ್ಮ ಮತ ನಮ್ಮ ಪವರ್ ಎಂದರು. ಇದೇ ವೇಳೆ ಸನ್ಮಾರ್ಗದ ಉಪಾಧ್ಯಕ್ಷರಾದ ಸಲ್ಲ ಹನುಮಂತ ರೆಡ್ಡಿ, ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್, ಸ್ಥಾಪಕ ಅಧ್ಯಕ್ಷ ಜೆ ಪಿ ಮಂಜುನಾಥ, ಅಧ್ಯಕ್ಷ ಅಪ್ಪುರವಿ, ಶರಣ ಚಂದ್ರು ಮತ್ತು ಇನ್ನಿತರರು ಭಾಗವಹಿಸಿದ್ದರು