ಬಳ್ಳಾರಿ:ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ಭಾವಚಿತ್ರ, ಹೆಸರುಗಳು, ಜಿಲ್ಲಾಡಳಿತ ಮತ್ತು ಚುನಾವಣಾಧಿಕಾರಿಗಳು ಮೌನ, ನೀತಿ ಸಂಹಿತೆ ಉಲ್ಲಂಘನೆ.
ಗಣಿನಾಡು ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯ ಮುಂದೆನೇ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗಿದೆ. ಶುದ್ಧ ಕುಡಿಯುವ ನೀರಿನ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ಭಾವಚಿತ್ರ ಕಾಣುತ್ತಿದೆ. ಚುನಾವಣೆ ಸಂಬಂಧಿಸಿದ ಅಧಿಕಾರಿಗಳು ನಿದ್ದೆಗೆ ಜಾರಿದ್ರಾ.
2023 ರ ವಿಧಾನ ಸಭಾ ಚುನಾವಣೆಗೆ ಭಾರತೀಯ ಚುನಾವಣೆ ಆಯೋಗ ಚುನಾವಣೆ ನೀತಿ ಸಂಹಿತೆಯನ್ನು, ನಿಯಮಗಳನ್ನು ಮಾರ್ಚ್ 29ಕ್ಕೆ ಜಾರಿಗೆ ಬಂದಿದೆ. ಆದ್ರೇ 13 ದಿನಗಳ ಕಳೆದರೂ ಈ ನೀರಿನ ಟ್ಯಾಂಕ್ ಮೇಲಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರು ಭಾವ ಚಿತ್ರ ಹಾಗೂ ಅವರ ಹೆಸರು ಗಳು ಸಾರ್ವಜನಿಕರಿಗೆ ಎದ್ದು ಕಾಣುತ್ತಿವೆ.
ಆದ್ರೇ ಗಣಿನಾಡು ಬಳ್ಳಾರಿ ನಗರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕಛೇರಿಯ ಮುಂದೆ ಈ ಘಟನೆ ಆಗಿದೆ.
ಇನ್ನು ಈ ಪ್ರದೇಶದಲ್ಲಿ ನೂರಾರು ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹಾಗೂ ಅಲ್ಲಿನ ಪಾರ್ಕ್ ನಲ್ಲಿ ಓದಲು ಆಗಮಿಸುತ್ತಾರೆ. ಇದು ಸಾರ್ವಜನಿಕವಾಗಿ ಕಾಣುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ