ಬಳ್ಳಾರಿಯ ಆದರ್ಶ ಹಾರ್ಟ್ ಕೇರ್ ಸೆಂಟರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಹೃದಯ ತಪಾಸಣಾ ಶಿಬಿರ

Share and Enjoy !

Shares
Listen to this article

ಬಳ್ಳಾರಿ: ಬಳ್ಳಾರಿಯ ಆದರ್ಶ ಹಾರ್ಟ್ ಕೇರ್ ಸೆಂಟರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಉಚಿತ ಹೃದಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಬಳ್ಳಾರಿಯ ಯುವ ಮುಖಂಡ ಮತ್ತು ನಗರ ಸಭೆ ಸದಸ್ಯರಾಗಿದ್ದ ಸಿರಿಗೇರಿ ಬಸವ ರಾಜ್ ಅವರ 35ನೇ ಪುಣ್ಯ ತಿಥಿಯ ಅಂಗವಾಗಿ ಇಂದು ನಡೆದ ಕಾರ್ಯಕ್ರಮವನ್ನು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರಾದ ಡಾಕ್ಟರ್ ಕೆ ಸತೀಶ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಪನ್ನರಾಜ್ ಸಿರಿಗೇರಿ ಬಸವರಾಜ ಪಲ್ಲೆದ್ ಹಾಗು ವೈದ್ಯರಾದ ಡಾ. ದಿವಾಕರಗಡ್ಡಿ ಡಾ. ಕೊಟ್ರೇಶ್ ಡಾಕ್ಟರ್ ಹರೀಶ್ ಡಾಕ್ಟರ್ ಹಳ್ಳಿ ಕರಿಬಸಪ್ಪ ಡಾ: ಸುಪ್ರೀತಾ ಸಿರಿಗೇರಿ ಹಾಗೂ ಇತರರು ಹಾಜರಿದ್ದರು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮವು ಮಧ್ಯಾಹ್ನ 2 ಗಂಟೆಯವರೆಗೂ ಮುಂದುವರೆಯುವುದು ಎಂದು ನಿರ್ದೇಶಕರು ತಿಳಿಸಿದರು.

ಆಸ್ಪತ್ರೆಯ ಆಡಳಿತ ಮಂಡಳಿಯ ಪರವಾಗಿ ಸಹಕರಿಸಿದ ಎಲ್ಲಾ ಸಿಬ್ಬಂದಿಗೆ ಹಾಗೂ ತಪಾಸಣೆಗೊಳಗಾದ ಸಾರ್ವಜನಿಕರಿಗೆ ಧನ್ಯವಾದಗಳು ತಿಳಿಸಲಾಯಿತು

 

Share and Enjoy !

Shares