ಬಳ್ಳಾರಿ :ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದ ಹಾದಿ, ಅವರ ನೀತಿ, ನಿಯಮ, ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹಾಗೂ ಪ್ರತಿಯೊಂದು ಕ್ಷೇತ್ರದಲ್ಲಿ ಸಮಾನತೆ ಅಗತ್ಯವಾಗಿ ಬೇಕು ಎಂದು ಕರ್ನಾಟಕ ರಾಜ್ಯಾಧ್ಯಕ್ಷ ಮಾದರ ಚನ್ನಯ್ಯ ಸಂಘ ರಾಜ್ಯಾಧ್ಯಕ್ಷರಾದ ಡಾ. ಎಚ್ ಹನುಮೇಶ್ ಜೋಳದರಾಶಿ ನುಡಿದರು.
ಬಳ್ಳಾರಿ ನಗರದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿ ಅಂಗವಾಗಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ಶ್ರೀ ಮಾದರ ಚೆನ್ನಯ್ಯ ಸಂಘ ರಾಜ್ಯಾಧ್ಯಕ್ಷರಾದ ಡಾ. ಎಚ್ ಹನುಮೇಶ್ ಜೋಳದರಾಶಿ, ಕಾನೂನು ಸಲಹೆಗಾರ ಡಾ.ಟಿ ದುರ್ಗಪ್ಪ, ಗೌರವಾಧ್ಯಕ್ಷ ಎಂ.ನಾರಾಯಣ, ಜಿಲ್ಲಾ ಅಧ್ಯಕ್ಷ ಡಿ.ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಿ.ಸಿದ್ದೇಶ, ಗುರುರಾಜ ಎಚ್. ಸಂಘಟನಾ ಕಾರ್ಯದರ್ಶಿ ಮತ್ತು ಎ.ಕೆ ಮಾರಪ್ಪ ಖಜಾಂಚಿ, ನಾಗಪ್ಪ ಮನೋಜ್ ಭಾಗವಹಿಸಿದ್ದರು.