ನಿವೇದಿತ ಶಾಲೆಯಲ್ಲಿ ಡಾಕ್ಟರ್. ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಆಚರಣೆ..

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ಕಂಪ್ಲಿ: ಕಂಪ್ಲಿಯ ನಿವೇದಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂವಿಧಾನ ಶಿಲ್ಪಿ, ಡಾ. ಬಿಆರ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಸರಳವಾಗಿ ಆಚರಣೆಯನ್ನು ಮಾಡಿದರು…

 

ಈ ಸಮಯದಲ್ಲಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಂ.ಪುಷ್ ಡಾ ಬಿ ಆರ್ ಅಂಬೇಡ್ಕರ್ ಅವರು ಶಿಕ್ಷಣವನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ

ಸಂವಿಧಾನವನ್ನು ಎಲ್ಲರ ಓದಿ ಸಂವಿಧಾನದಲ್ಲಿರುವ ಸಂವಿಧಾನ ಬದ್ಧ  ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ,  ಮುಂದೆ ಸಮಾಜಕ್ಕೆ ಮಾದರಿಯ ವ್ಯಕ್ತಿಗಳಾಗಿ ಎಂದು ಮಕ್ಕಳಿಗೆ ಅಂಬೇಡ್ಕರ್ ಅವರ ಮಾದರಿ ಜೀವನದ ಬಗ್ಗೆ ತಿಳಿಸಿದರು..

 

ನಂತರ ಮಾತನಾಡಿದ ಶಾಲಾ ಮುಖ್ಯ ಗುರುಗಳಾದ ಹೆಚ್ ಮರಿಯಪ್ಪ ಅಂಬೇಡ್ಕರ್ ಅವರು ಬಹಳಷ್ಟು ನೋವು-ಕಷ್ಟವನ್ನು ಅನುಭವಿಸಿದ್ದು   ಶಿಕ್ಷಣದಲ್ಲಿ ಬಹುದೊಡ್ಡ ಸಾಧನೆಗಳನ್ನು ಮಾಡಿದ್ದಾರೆ, ಇಂದಿನ ಮಕ್ಕಳೆ ನಾಳೆ ಪ್ರಜೆಗಳು, ಮಕ್ಕಳು ನಮ್ಮ ದೇಶದ ಆಸ್ತಿ… ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನು ಆಸ್ತಿ ಮಾಡಿ.. ಅಂಬೇಡ್ಕರ್ ಅವರ ಶಿಕ್ಷಣ , ಸಂಘಟನೆ, ಹೋರಾಟ ಎಂಬ ಗುರಿಗಳನ್ನು ಇಟ್ಟುಕೊಂಡು ಸಾಧನೆಗಳನ್ನು ಮಾಡಿದ್ದಾರೆ. ನಿಮ್ಮ ಜೀವನದಲ್ಲಿ ಶಿಕ್ಷಣ ಬಹಳಷ್ಟು ಪ್ರಾಮುಖ್ಯತೆ, ಶಿಕ್ಷಣ ಎನ್ನುವುದು ಹುಲಿಯ ಹಾಲಿದ್ದಂತೆ.. ಅದನ್ನು ಕುಡಿದವರು ಗರ್ಜಿಸಲೇಬೇಕು… ಶಿಕ್ಷಣಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ  ಯಾವುದೂ ಇಲ್ಲ ಎಂದು  ತಿಳಿಸಿದರು‌‌….

ಈ ಸಂದರ್ಭದಲ್ಲಿ ನಿವೇದಿತ  ಶಾಲೆಯ ಕಾರ್ಯದರ್ಶಿಗಳಾದ ಕೆ.ರಾಮು  ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಎಂ.ಪುಷ್ಪ ಮುಖ್ಯ ಗುರುಗಳಾದ ಹೆಚ್ ಮರಿಯಪ್ಪ ಸಹ ಶಿಕ್ಷಕಿ ಎಂ ಆಶಾ ಹಾಗೂ  ಸಿಬ್ಬಂದಿ ವರ್ಗದ ಮಕ್ಕಳು ಉಪಸ್ಥಿತರಿದ್ದರು…

Share and Enjoy !

Shares