ವಿಷು ಪೂಜೆಯ ಪ್ರಯುಕ್ತ ಗಂಗಾವತಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಇರುಮುಡಿ ಕಾರ್ಯಕ್ರಮ

Share and Enjoy !

Shares
Listen to this article

ಗಂಗಾವತಿ: ಗಂಗಾವತಿಯಲ್ಲಿ ಇಂದು ಕೇರಳದ ಅಯ್ಯಪ್ಪ ಸ್ವಾಮಿ ಸನ್ನಿಧಿಯ ವಿಷು ಪೂಜೆಯ ಪ್ರಯುಕ್ತ ಇಂದು ಗಂಗಾವತಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ  ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪನಿಗೆ ವಿಶೇಷ ಪೂಜೆ, ಹಾಗೂ ಅಭಿಷೇಕ ಮತ್ತು ಇರುಮುಡಿ ಕಾರ್ಯಕ್ರಮ ಹಾಗೂ ಅನ್ನದಾನ ಪ್ರಸಾದವನ್ನು ಮಾಡಲಾಯಿತು..

ಈ ಸಮಯದಲ್ಲಿ ಮಾತನಾಡಿದ ಗಂಗಾವತಿಯ ಗುರುಸ್ವಾಮಿಗಳಾದ ಶ್ರೀ ಪರಮ ಪೂಜ್ಯ ತಾತಯ್ಯ ಗುರುಸ್ವಾಮಿಗಳು ಮಾತಾನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಷು ಪೂಜೆಯ ಪ್ರಯುಕ್ತ ನಮ್ಮ ಗಂಗಾವತಿ ದೇವಸ್ಥಾನದಲ್ಲಿ ಅಯ್ಯಪ್ಪನ ಅಭಿಷೇಕ, ವಿಶೇಷ ಪೂಜೆ ಇರುತ್ತದೆ..

ಗಂಗಾವತಿಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ  ಎಲ್ಲರ ಶಿಷ್ಯರ ಪರವಾಗಿ ಇಂದು ನಾನು ಅಯ್ಯಪ್ಪನಿಗೆ ಇರುಮುಡಿಯನ್ನು ಅರ್ಪಿಸಿರುತ್ತೇನೆ.. ಇದು ಕೇವಲ ಗಂಗಾವತಿಗೆ ಮಾತ್ರವಲ್ಲ, ಸರ್ವ ಭಕ್ತಾದಿಗಳ ಪರವಾಗಿಯೂ ನಾನು ಅಯ್ಯಪ್ಪನಿಗೆ ಇರುಮುಡಿಯನ್ನು ಕೊಟ್ಟಿರುತ್ತೇನೆ. ಹಾಗೂ ಈ  ಅಯ್ಯಪ್ಪ ಸ್ವಾಮಿ ಪೂಜೆಗೆ ಅನ್ನದಾನ ಪ್ರಸಾದವನ್ನು ಶ್ರೀ ಬೂದಿ ಬಸವೇಶ್ವರ ಡಯಗೋಸ್ಟಿಕ್ಸ್  ಶ್ರೀ ಪ್ರದೀಪ್ ಗೌಡ ದೇವರ ಶೆಟ್ಟಿ ಹಿರೇ ಜಂತ್ಕಲ್  ರವರು ಮಾಡಿಸಿದ್ದಾರೆ ಎಂದು ತಿಳಿಸಿದರು..

ಈ ಸಮಯದಲ್ಲಿ ಮಾತನಾಡಿದ ಕುರುಗೋಡಿನ ಗಾದಿಲಿಂಗ ಗುರುಸ್ವಾಮಿಗಳು ನಿಮಗಾಗಿ ಸಮಯ ನೀಡುವ ವ್ಯಕ್ತಿಗಳನ್ನು ಗೌರವಿಸಿ, ಏಕೆಂದರೆ ಅವರು ಹಂಚಿಕೊಳ್ಳುವುದು ಕೇವಲ ಸಮಯವಲ್ಲ, ಅವರ ಜೀವನದ ಒಂದು ಭಾಗ ಎಂದು ತಿಳಿಸಿದರು,

ಅಂದರೆ ಭಗವಂತನ ಸೇವೆಯೇ ಒಂದು ಭಾಗವಾಗಿದೆ ಎಂದರು‌. ಈ ಸಂದರ್ಭದಲ್ಲಿ ಹಲವಾರು ಜಿಲ್ಲೆ ಹಾಗೂ ತಾಲೂಕಿನಿಂದ ಶ್ರೀ ಪರಮ ಪೂಜ್ಯ ತಾತಯ್ಯ ಗುರುಸ್ವಾಮಿಗಳ ಶಿಷ್ಯರು ಆಗಮಿಸಿದರು…

ಗಂಗಾವತಿಯ ಸಾಯಿಬಾಬಾ ಗುರುಸ್ವಾಮಿ, ವೆಂಕಟೇಶ್ ಜಂಟಿ ಗುರುಸ್ವಾಮಿ, ಶೇಖರ್ ಗುರುಸ್ವಾಮಿ, ಶ್ರೀನಿವಾಸ್  ಸ್ವಾಮಿ, ಪ್ರದೀಪ್ ಗೌಡ ದೇವರ ಶೆಟ್ಟಿ ಸ್ವಾಮಿ… ಉಪ್ಪಿ ಬಸವರಾಜ್ ಸ್ವಾಮಿ ರುದ್ರಮುನಿ ಸ್ವಾಮಿ,

ರಾಮಸಾಗರದ ಶಿವಪ್ಪ ಗುರುಸ್ವಾಮಿಗಳು, ಕುರುಗೋಡಿನ ಗಾದಿಲಿಂಗ ಗುರುಸ್ವಾಮಿ, ಹೊಸ ನೆಲ್ಲೂಡಿ ಹೆಚ್. ಮರಿಯಪ್ಪಸ್ವಾಮಿ, ಗಂಗಾವತಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸರ್ವ ಸದಸ್ಯರು ಹಾಗೂ ಎಲ್ಲಾ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

Share and Enjoy !

Shares