ಎಂ.ಶ್ರೀನಿವಾಸಲು ಕಾಂಗ್ರೆಸ್ ಸೇರ್ಪಡೆಯಿಂದ ನಮಗೆ ದೊಡ್ಡ ಶಕ್ತಿಬಂದಂತಾಗಿದೆ- ಶಾಸಕ ಬಿ.ನಾಗೇಂದ್ರ.

Share and Enjoy !

Shares
Listen to this article

ಬಳ್ಳಾರಿ: ಯುವ ನಾಯಕ ಎಂ.ಶ್ರೀನಿವಾಸಲು ಸೇರಿ ವಿವಿಧ ಮುಖಂಡರು ಕಾಂಗ್ರೆಸ್ ಸೇರ್ಪಡೆಯಿಂದ ಗ್ರಾಮೀಣ ಕ್ಷೇತ್ರ ಹಾಗೂ ನಗರ ಕ್ಷೇತ್ರಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ, ಬಿಜೆಪಿ ಸೇರಿ ಇತರ ಪಕ್ಷಗಳ ಆಟ ನಡೆಯೋಲ್ಲ, ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ, ಯಾವುದೇ ಸಮಸ್ಯೆ ಇರಲಿ ನಿಮ್ಮೊಂದಿಗೆ ನಾನಿರುವೆ ಎಂದು ಶಾಸಕ, ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ತಿಳಿಸಿದರು ‌

 

ನಗರದ 33ನೇ ವಾರ್ಡ್, ವಿನಾಯಕ ನಗರ, ಅಲ್ಲಿಪುರ ಪ್ರದೇಶದ ಕಾಂಗ್ರೆಸ್ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಯುವ ನಾಯಕ ಎಂ.ಶ್ರೀನಿವಾಸಲು ಸೇರಿ ವಿವಿಧ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

 

ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ದಿನದಿಂದ ದಿನಕ್ಕೆ ಬಿಜೆಪಿ, ಜೆಡಿಎಸ್ ಸೇರಿ ಇತರ ಪಕ್ಷಗಳಿಂದ ಅನೇಕ ನಾಯಕರು, ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಸಂತಸ ಮೂಡಿಸಿದೆ. ವಿನಾಯಕ ನಗರ, ಅಲ್ಲಿಪುರ ಪ್ರದೇಶದ ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಚಿರಋಣಿಯಾಗಿರುವೆ, ಯಾವಾಗಲೂ ನಿಮ್ಮೊಂದಿಗೆ ನಾನಿರುವೆ, ಹೆದರುವ ಪ್ರಮೆಯವೇ ಇಲ್ಲ, ಬಿಜೆಪಿ ಅವರಂತೆ ಸುಳ್ಳು ಹೇಳುವ ಜಾಯಮಾನ ನನ್ನದಲ್ಲ, ಆಗುವದಿದ್ದರೇ ಮಾತ್ರ ಭರವಸೆ ನೀಡುವೆ, ಸುಳ್ಳು ಹೇಳಿ ಕಚೇರಿ ಕಚೇರಿ ಅಲೆದಾಡಿಸುವ ಸಂಸ್ಕೃತಿ ನನ್ನದಲ್ಲ, ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸವಿಡಿ, ನಿಮ್ಮ ನಿರೀಕ್ಷೆಯಂತೆ ಅವದಿಯಲ್ಲಿ ಕೆಲಸ ಮಾಡಿ, ರಾಜ್ಯದಲ್ಲೇ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿಯನ್ನಾಗಿ ಮಾಡುವೆ ಎಂದರು.

 

ಡಬಲ್‌ ಡಿಗ್ರಿ ಪಡೆದವನು ನಾನು, ಬಡಜನರ ಕಷ್ಟಗಳನ್ನು ಹತ್ತಿರದಿಂದ ನೊಡಿರುವೆ, ಪಕ್ಷಕ್ಕೆ ಸೇರ್ಪಡೆಯಾದವರನ್ನು ಬಿಜೆಪಿ ಅವರು ಬೆದರಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ, ಈ ಸಂಸ್ಕೃತಿ ಸರಿಯಲ್ಲ, ಜನರು ಯಾವುದೇ ಕಾರಣಕ್ಕೂ ಹೆದರುವುದು ಬೇಡ, ಏನೇ ಬರಲಿ ನಿಮ್ಮೊಂದಿಗೆ ನಾನಿರಲಿ, ಬಡಜನರ ಮನೆಗಳನ್ನು ಕಿತ್ತಿಸುವೆ ಎಂದು ಬೆದರಿಕೆ ಹಾಕುವುದು ಸರಿಯಲ್ಲ, ರಾಜಕೀಯದಲ್ಲಿ ಸೋಲು, ಗೆಲುವು ಸಾಮಾನ್ಯ,  ಬಡವರ ಮೇಲೆ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ, ಸಂಸ್ಕೃತಿಯಲ್ಲ, ಇಂತಹ ಗೊಡ್ಡು ಬೆದರಿಕೆಗೆ ಹೆದರುವ ಜಾಯಮಾನ ನನ್ನದಲ್ಲ, ಬಿಜೆಪಿ ಅವರ ಸುಳ್ಳು ಭರವಸೆ, ನಾನಾ ಅಮೀಷಗಳಿಗೆ ಮತದಾರರು ಒಳಗಾಗದೇ ಪ್ರತಿಯೋಬ್ಬರೂ ಕಾಂಗ್ರೆಸ್ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು.

ಈ ಸಮಯದಲ್ಲಿ ಬಡಾವಣೆಯ ಪ್ರಮುಖರು, ಶಾಸಕರ‌ ಬೆಂಬಲಿಗರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

Share and Enjoy !

Shares