ಅಧಿಕಾರಿಗಳ ಬೇಜವಾಬ್ದಾರಿತನದಿಂದ ಟ್ರಾಫಿಕ್ ನಲ್ಲಿ ಸಿಲುಕಿದ ಅಗ್ನಿಶಾಮಕ ದಳ ವಾಹನ.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:

ರಾಯಚೂರು ಜಿಲ್ಲೆ…

 

ಸಿಂಧನೂರು: ಅಗ್ನಿಶಾಮಕ ದಳ ವಾಹನ, ಆಂಬುಲೆನ್ಸ್  ಸೇರಿದಂತೆ ಇತರೆ ಅಗತ್ಯತೆ ತುರ್ತು ಸೇವೆ ಸಾರ್ವಜನಿಕರ ರಕ್ಷಣೆಗೆ ಅತ್ಯವಶ್ಯಕ ಬೇಕೇಬೇಕು. ಆದರೆ ಚುನಾವಣೆಯ  ಅಧಿಕಾರಿಗಳ ಹಾಗೂ ಪೊಲೀಸರ ಬೇಜವಾಬ್ದಾರಿತನದಿಂದ ಸೋಮವಾರದಂದು ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಸಾವಿರಾರು ಜನತೆಯೊಂದಿಗೆ ಬೃಹತ್ ಮೆರವಣಿಗೆ ನಡೆಸುತ್ತಿರುವ ಸ್ಥಳದಲ್ಲಿ ಚುನಾವಣೆ ಅಧಿಕಾರಿಗಳು ಸೇರಿದಂತೆ ನಗರ ಪೊಲೀಸ್ ಠಾಣೆ ಪಿಐ ನೇತೃತ್ವದಲ್ಲಿ ಬಾರಿ ಭದ್ರತೆ ಕಲ್ಪಿಸಲಾಗಿತ್ತು.ಇಷ್ಟೆಲ್ಲ ವ್ಯವಸ್ಥೆ ಇದ್ದರು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಬದಲಾಗಿ ಮೆರವಣಿಗೆ ಭದ್ರತೆಗೆ ಮಾತ್ರ ಸೀಮಿತ ಎನ್ನುವಂತೆ ಧೋರಣೆ ತಾಳಿದ ಹಿನ್ನೆಲೆ ಮಲ್ಕಾಪುರ ಗ್ರಾಮದಲ್ಲಿ ಬೆಂಕಿ ನಂದಿಸಲು ತೆರಳುತ್ತಿರುವ ಅಗ್ನಿಶಾಮಕ ದಳದ ವಾಹನ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡುವ ಪರಿಸ್ಥಿತಿ ಉದ್ಭವಾಗಿತು.ಅಗ್ನಿಶಾಮಕ ದಳದ ಸಿಬ್ಬಂದಿ ಯೇ ವಾಹನದಿಂದ ಇಳಿದು ವಾಹನ ತೆರಳಲು ನೋಡಿಕೊಳ್ಳುತ್ತಿರುವುದು ಕಂಡು ನಾಮಪತ್ರ ಸಲ್ಲಿಸುವವರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿರುವುದು ಕಂಡು ಬಂತು.

Share and Enjoy !

Shares