ಬಳ್ಳಾರಿ, ಏ. 17;ನಾನು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಳ್ಳಾರಿ ನಗರ ಸಾಮಾನ್ಯ ವಿಧಾನಸಭಾಕ್ಷೇತ್ರದಲ್ಲಿ ಏಪ್ರಿಲ್ ೧೯ ಅಥವಾ ಏಪ್ರಿಲ್ ೨೦ ರಂದು ನಾಮಪತ್ರ ಸಲ್ಲಿಸಿ ಚುನಾವಣೆ ಮುಗಿಯುವವರೆಗೂ ಕಪ್ಪು ಟಿ-ಶಟ್೯ ಧರಿಸಿ ಪ್ರತಿಭಟನೆ ನಡೆಸಲಿದ್ದೇನೆ ಎಂದು ಮಾಜಿ ಶಾಸಕ ಅನಿಲ್ ಎಚ್. ಲಾಡ್ ಅವರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರಿಗೆ ಯಾವ ಮಾನದಂಡದ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ ಎನ್ನುವುದು ಯಕ್ಷಪ್ರಶ್ನೆ ಎಂದರು.
ಎನ್.ವೈ. ಗೋಪಾಲಕೃಷ್ಣ, ಮತ್ತು ಎಚ್.ಆರ್. ಗವಿಯಪ್ಪ ಅವರು ಬಿಜೆಪಿ ಬಿಟ್ಟು ಬಂದ ಕೂಡಲೆ ಕಾಂಗ್ರೆಸ್ ಟಿಕೇಟ್ ಘೋಷಣೆ ಮಾಡಿದೆ. ಯಾವ ಮಾನದಂಡದ ಮೇಲೆ ಇವರಿಗೆ ಟಿಕೇಟ್ ನೀಡಲಾಗಿದೆ ಎನ್ನುವುದು ದೊಡ್ಡ ಪ್ರಶ್ನೆ ಎಂದರು.
ಬಹುಶಃ ಇದು ನನ್ನ ಕೊನೆಯ ಚುನಾವಣೆ. ರಾಜಕೀಯವಾಗಿ ಪಕ್ಷ ನನ್ನನ್ನು ಅರ್ಧ ಮುಗಿಸಿದೆ. ಇನ್ನುಳಿದ ಅರ್ಧದಷ್ಟು ಪಕ್ಷದ ಮತದಾರರಿಗೆ ಬಿಟ್ಟದ್ದು ಎಂದರು.
ಕಾಂಗ್ರೆಸ್ ಮುಖಂಡರಾದ ಲಕ್ಷ್ಮಣ, ಹರ್ಷದ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.