ಲಕ್ಷ್ಮೀ ಅರುಣ ನಾಮಪತ್ರ ಸಲ್ಲಿಕೆ: ದಾರಿ ಉದ್ದಕ್ಕೂ ಜನಸಾಗರ.

Share and Enjoy !

Shares
Listen to this article

ಬಳ್ಳಾರಿ :ಗಣಿನಾಡು ಬಳ್ಳಾರಿ ನಗರದ ಹವಂಬಾವಿ ಪ್ರದೇಶದ ಗಾಲಿ ಜನಾರ್ದನ ರೆಡ್ಡಿ ಅವರ ಮನೆಯಿಂದ ತೆರೆದ ವಾಹನದಲ್ಲಿ ಆಗಮಿಸಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಪಕ್ಷದ ಬಳ್ಳಾರಿ ನಗರದ ಅಭ್ಯರ್ಥಿ ಲಕ್ಷ್ಮೀ ಅರುಣ ಅವರು ನಾಮ‌ಪತ್ರವನ್ನು ಆಯುಕ್ತ ಎಸ್.ಎನ್ ರುದ್ರೇಶ್ ಅವರಿಗೆ ಸಲ್ಲಿಸಿದರು.‌

ನಗರದಲ್ಲಿ ಇಂದು ಸಾವಿರಾರೂ ಯುವತಿಯರು, ಮಹಿಳೆಯರು ಈ ನಾಮಪತ್ರಸಲ್ಲಿಕೆ ಸಮಯದಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಮೂವರು ರೆಡ್ಡಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ಒಂದು ಕಡೆ ಬಿಜೆಪಿಯಿಂದ ಜಿ.ಸೋಮಶೇಖರ್ ರೆಡ್ಡಿ ಮತ್ತೊಬ್ಬ ಕಡೆ ಕಾಂಗ್ರೇಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ, ಮತ್ತೊಂದು ಕಡೆ ಲಕ್ಷ್ಮೀ ಅರುಣ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಎರಡು ರಾಷ್ಟ್ರಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಒಲವು ಇದೆಯಾ ಎನ್ನುವ ಪ್ರಶ್ನೆ ಸಾಮಾನ್ಯ ಜನರನ್ನು ಕಾಡುತ್ತೆ ! ಯಾರೇ ಸ್ಪರ್ಧೆ ಮಾಡಲಿ ನಗರದ ಅಭಿವೃದ್ಧಿ, ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ಆಗಿಲಿ.

ಚಿಕ್ಕ ಮಕ್ಕಳು ಭಾಗಿ:  ನಾಮಪತ್ರಸಲ್ಲಿಕೆ ಸಮಯದಲ್ಲಿ ನಗರದ ವಿವಿಧ ಪ್ರದೇಶಗಳಿಂದ ಕಾರ್ಯಕರ್ತರು, ಮುಖಂಡು ಬೈಕ್, ಆಟೋಗಳಲ್ಲಿ ರಾಶಿಗಟ್ಟಲೇ ಆಗಮಿಸಿದರು. ಈ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇದ್ದ ಕಾರಣ ಮಕ್ಕಳು ತಮ್ಮ ಪೋಷಕರೊಂದಿಗೆ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಸಿಲಿಗೆ ಕತ್ತರಿಸಿದ ಜನರು : ಗಣಿನಾಡು ಬಳ್ಳಾರಿ ನಗರದಲ್ಲಿ ಸೋಮವಾರದೊಂದು ಬಿಸಿಗೆ ಕಾರ್ಯಕರ್ತರರು, ಮುಖಂಡರು  ತತ್ತರಿಸಿದರು. ಕಾರ್ಯಕರ್ತರಿಗೆ ತಲೆ ಟೋಪಿಗಳನ್ನು ಸಹ ವಿತರಣೆ ಮಾಡಿದರು. ಇನ್ನು ಈ ಬಿಸಿಲಿಗೆ ಕಾರ್ಯಕರ್ತರಿಗೆ ತಂಪಾದ ಮಜ್ಜಿಗೆ, ನೀರಿನ ಪ್ಯಾಕೆಟ್ ಗಳನ್ನು ವಿತರಣೆ ಮಾಡಿದರು. ಈ ಸಮಯದಲ್ಲಿ ನಗರದ ವಿವಿಧ ಪ್ರದೇಶಗಳಿಂದ ಸಾವಿರಾರೂ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.

ಟ್ರಾಪಿಕ್ ಜಾಮ್ : ನಗರದ ರಾಯಲ್, ದುರ್ಗಮ್ಮ ಗುಡಿ, ತಾಳೂರು ರಸ್ತೆ ವೃತ್ತ, ಎಸ್.ಲಿ ವೃತ್ತ ಹಾಗೂ ಸಿರುಗುಪ್ಪ ರಸ್ತೆ ಸಂಪೂರ್ಣ ಟ್ರಾಫಿಕ್  ಜಾಮ್ ಆಗಿತ್ತು. ಬಿರು ಬಿಸಿಲಿನಲ್ಲಿ ಖಾಲಿ ಪಡೆದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು.

 

ಈ ಸಮಯದಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಪಕ್ಷದ ಗೋನಾಳ ರಾಜಶೇಖರ್, ಶಿಲ್ಪ ವೆಂಕಟರಮಣ, ರಾಜೇಶ್, ಪವೀನ್ ಬಾನು ಮತ್ತು ಕಾರ್ಯಕರ್ತರು, ಮುಖಂಡ ಭಾಗವಹಿಸಿದ್ದರು.

Share and Enjoy !

Shares