ಕಂಪ್ಲಿ:ಸಮೀಪದ ಹೊಸ ನೆಲ್ಲೂಡಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ರವರು ನಾಮಪತ್ರ ಸಲ್ಲಿಕೆಗೆ ಹೊಸ ನೆಲ್ಲೂಡಿ ಗ್ರಾಮದ ವತಿಯಿಂದ ಸಾವಿರಾರು ಅಭಿಮಾನಿಗಳು ರೈತರು ಸೇರಿ ಆಶೀರ್ವಾದ ಮಾಡಲು ತೆರಳಿದರು..
ಕಾಂಗ್ರೆಸ್ ಪಕ್ಷದ ವತಿಯಿಂದ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಲು ಜೆ.ಎನ್ ಗಣೇಶ್ ರವರ ಪರವಾಗಿ ಅಭಿಮಾನ ಪೂರ್ವಕವಾಗಿ ಆಶೀರ್ವಾದ ಮಾಡಲು ಹೊಸ ನೆಲ್ಲೂಡಿ ಗ್ರಾಮದ ರೈತರು, ಹಿರಿಯರು, ಕಿರಿಯರು ಹಾಗೂ ಯುವಕರು ಸೇರಿ ಅವರಿಗೆ ಪ್ರೋತ್ಸಾಹ ಮಾಡಲು ತೆರಳಿದರು..
ಈ ಸಂದರ್ಭದಲ್ಲಿ ಮಾತನಾಡಿದ ಸಣ್ಣ ಹುಲಗಪ್ಪ ಇಂದು ಜೆ.ಎನ್. ಗಣೇಶ್ ಅಣ್ಣನವರು ನಾಮಪತ್ರ ಸಲ್ಲಿಕೆಗಾಗಿ ನಮ್ಮ ಊರಿನ ರೈತರು ಹಿರಿಯರು, ಕಿರಿಯರು, ಯುವಕರು ಸೇರಿ, ಜೆ.ಎನ್. ಗಣೇಶ್ ರವರಿಗೆ ಅಭಿಮಾನ ಪೂರಕವಾಗಿ ಆಶೀರ್ವಾದ ಮಾಡಲು ಎಲ್ಲಾ ಸಮುದಾಯದವರು ಸೇರಿ ಹೊರಟಿದ್ದೇವೆ ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಊರಿನ ಹಿರಿಯರು, ಗಣ್ಯರು, ಮುಖಂಡರು, ಎಲ್ಲ ರೈತರು ಮತ್ತು ಯುವಕರು ಹಾಗೂ ಎಲ್ಲ ಸಮುದಾಯದವರು ಉಪಸ್ಥಿತರಿದ್ದರು…