ಕಾಂಗ್ರೆಸ್ ಸೇರ್ಪಡೆ ನಾರಾ ಭರತ್ ರೆಡ್ಡಿ ಸಮ್ಮುಖದಲ್ಲಿ ಕೈ ಹಿಡಿದ ನೂರಾರು ಜನ.

Share and Enjoy !

Shares
Listen to this article

ಬಳ್ಳಾರಿ: ನಗರದ ಬಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ಬಿಜೆಪಿ ಮುಖಂಡ ಮಲ್ಲನಗೌಡರ ಪ್ರಮುಖ ಬೆಂಬಲಿಗರು ಕಾಂಗ್ರೆಸ್ ನಗರ ಕ್ಷೇತ್ರ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹಾಗೂ ಚಾನಾಳ್ ಶೇಖರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ಈ ವೇಳೆ ಸಮುದಾಯದ ಎಲ್ಲ ಮುಖಂಡರು ಚರ್ಚೆ ಮಾಡಿ ಈ ಸಲ ಚುನಾವಣೆಯಲ್ಲಿ ನಾರಾ ಭರತ್ ರೆಡ್ಡಿ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ತೀರ್ಮಾನಿಸಲಾಯಿತು.

ಬಿಜೆಪಿ ಮುಖಂಡ ಮಲ್ಲನಗೌಡರ ಬೆಂಬಲಿಗರಾದ ಅಂಗಡಿ ನಟರಾಜ್, ಕೋರಿ ಸುರೇಶ್, ಸಿದ್ದಾರ್ಥ ಕಾಲೋನಿ ಪ್ರಮುಖ ಮುಖಂಡ ಲಕ್ಷ್ಮೀ ರೆಡ್ಡಿ ಅವರು ಸೇರಿದಂತೆ ಅವರ ಎಲ್ಲ ಆಪ್ತರು ಇಂದು ಕಾಂಗ್ರೆಸ್ ಸೇರ್ಪಡೆಗೊಂಡರು.

21ನೇ ವಾರ್ಡ್‍ನಲ್ಲಿ ಪ್ರಮುಖ ಮುಖಂಡರ ಸಭೆ:  21ನೇ ವಾರ್ಡ್‍ನ ಬಸವೇಶ್ವರನಗರದ ವೀರಶೈವ ಗುರುಕುಲ ಆವರಣದಲ್ಲಿ ನಡೆದ ಸಭೆಯಲ್ಲಿ ನಾರಾ ಭರತ್ ರೆಡ್ಡಿ ಅವರನ್ನು ಭಾರೀ ಬಹುಮತದಿಂದ ಗೆಲ್ಲಿಸುವಂತೆ ಚರ್ಚೆ ನಡೆಸಿ, ತೀರ್ಮಾನಿಸಲಾಯಿತು. ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

ಜಿವ್ಹೇಶ್ವರಿ ರಾಮಕೃಷ್ಣ, ಲತಾ ಚಾನಾಳ್ ಶೇಖರ್, ಸುಮಂಗಳಮ್ಮ, ಜಾನೆಕುಂಟೆ ಕುಮ್ಮಿ, ಭಾಸ್ಕರ್ ರೆಡ್ಡಿ, ನರೇಂದ್ರಬಾಬು, ಹಿರೇಮಠ್, ಸೂರ್ಯಪ್ರಕಾಶ್, ಶಬರಿ ರವಿಚಂದ್ರ, ಗುರುಸಿದ್ಧ, ಯಾಳ್ಪಿ ದಿವಾಕರ್, ಚಿದಾನಂದಪ್ಪ, ಪ್ರಭಾಕರ್‍ರೆಡ್ಡಿ, ಮಂಜುನಾಥಸ್ವಾಮಿ ಇನ್ನೂ ಹಲವು ಪ್ರಮುಖ ಮುಖಂಡರು ಭಾಗವಹಿಸಿದ್ದರು

Share and Enjoy !

Shares