ಬಳ್ಳಾರಿ : ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾದ ಶಾಸಕ ನಾಗೇಂದ್ರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಿಂದ ಪಾದಯಾತ್ರೆ ಮೂಲಕ ಏಳು ಮಕ್ಕಳ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಯ ಮುಖಾಂತರ ರಾಷ್ಟ್ರ ಮತ್ತು ರಾಜ್ಯ ನಾಯಕರೊಂದಿಗೆ ಎಸಿ ಆಫಿಸ್ ನಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ನಾಮಪತ್ರ ಸಲ್ಲಿಸಿದ ನಂತರ ಗ್ರಾಮೀಣ ಕ್ಷೇತ್ರದ ಜನರು ಬಹಳ ಪ್ರಬುದ್ಧರು ಹಣ ಹೆಂಡಕ್ಕೆ ಮಾರು ಹೋಗದೆ ನನಗೆ ಮತ ನೀಡುವ ಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಹಿರಿಯರು ಮತ್ತು ಕಿರಿಯರು ಕಾಂಗ್ರೆಸಿನ ಭದ್ರ ಬುನಾದಿಗಳ ಪಡೆ ಗೆಲ್ಲಿಸಲು ಸಿದ್ದ ರಾಗಿದ್ದಾರೆ. ಇವತ್ತು ರಾಜ್ಯದಲ್ಲಿ ಕಾಂಗ್ರೆಸಿನ ಬಿರುಗಾಳಿ ಇದೆ ಜಿಲ್ಲೆಯಲ್ಲಿ ಐದು ಕ್ಷೇತ್ರಗಳು ನಮ್ಮ ತಂತ್ರಗಾರಿಕೆ ಯಿಂದ ಗೆಲುವು ಸಾಧಿಸುತ್ತೆವೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಪಕ್ಷಕ್ಕೆ ಮತದಾರರು ಮತ್ತುಕಾರ್ಯಕರ್ತರೆ ಸ್ಟಾರ್ ಕ್ಯಾಂಪೇನ್ ಗಳು ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸಿನ ಬಿರುಗಾಳಿ ಇದೆ.ಜಿದ್ದಾಜಿದ್ದಿನ ನಡುವೆ ೧೫೦ ಸ್ಥಾನದೊಂದಿಗೆ ಸರ್ಕಾರ ಮಾಡುತ್ತೇವೆ, ಮತ್ತು ಗೆಲುವು ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಅನೇಕರು ಜನ ವಿರೋಧಿ ಸರ್ಕಾರವನ್ನು ಕಿತ್ತು ಹೊಗೆಯಲು ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಸಂಸದರು ಉಗ್ರಪ್ಪ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಅಲ್ಲಂ ವೀರಭದ್ರಪ್ಪ, ಉಗ್ರಪ್ಪ, ನಾರಾ ಭರತ್ ರೆಡ್ಡಿ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಮಂಜುಳಾ ವಕೀಲರ ಸಂಘದ ಅದ್ಯಕ್ಷ ಕಾಂಗ್ರೆಸ್ ಮುಖಂಡ ಕೆ.ಎರ್ರಿಗೌಡ ಕೆಪಿಸಿಸಿ ಮಾದ್ಯಮ ವಕ್ತಾರ ವೆಂಕಟೇಶ್ ಹೆಗಡೆ ಮತ್ತಿತರರು ಹಾಜರಿದ್ದರು.