ಬಳ್ಳಾರಿ :ಬಳ್ಳಾರಿ ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಯ ಕೌಲ್ ಬಜಾರ್ ಪ್ರದೇಶದ ಹಲವಾರು ಬಿ.ಜೆ.ಪಿ ಮುಖಂಡರು ಬಿ ನಾಗೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇಂದು ನಗರದ ಕೌಲ್ ಬಜಾರ್‌ನ ೨೮ನೇ ವಾರ್ಡ್ ಟ್ರೈನಿಂಗ್ ಶಾಲೆಯ ಪ್ರದೇಶದ ಮುಖಂಡರುಗಳಾದ ಖಲೀಲ್, ಝಂಡಾ ಜೀಲಾನ್, ಇರ್ಷಾದ್, ಅಸ್ಲಾಂ ಭಾಷಾ, ಇರ್ಫಾನ್, ಖಾದರ್ ಭಾಷಾ, ಫೈರೋಜ್, ದಿಲ್‌ಷಾದ್, ವಿಮಲಾ, ಗೌರಿ, ರಾಣೆಮ್ಮ ಸೇರಿದಂತೆ ಸುಮಾರು ಐವತ್ತು ಹೆಚ್ಚು ಮುಖಂಡರು ಬಿ.ಜೆ.ಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಶಾಸಕ ನಾಗೇಂದ್ರ ಮಾತನಾಡಿ, ಮುಸ್ಲಿಂ ಸಮುದಾಯಕ್ಕೆ ಆದ ಹಲವಾರು ತೊಂದರೆಗಳು ರಾಜ್ಯ ಮತ್ತು ಕೆಂದ್ರ ಡಬಲ್ ಇಂಜನ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ನೀಡುವಲ್ಲಿ ಅನ್ಯಾಯ ಮಾಡಿದೆ ಮತ್ತು ಇತ್ತೀಚೆಗೆ ಮೀಸಲಾತಿಯನ್ನು ಸಹ ರದ್ದುಪಡಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಜನಾಂಗದ ಯುವಕ ಮತ್ತು ಯುವತಿಯವರಿಗೆ ಶೈಕ್ಷಣೀಕವಾಗಿ ಮತ್ತು ಔದ್ಯೋಗಿಕವಾಗಿ ತೊಂದರೆ ಮಾಡಿದ್ದಾರೆ. ಹಾಗೂ ಬಳ್ಳಾರಿಯಲ್ಲಿರುವ ರಾಜ್ಯ ನಾಯಕರೆಂದು ಹೆಸರುಪಡೆದು ಕೊಂಡಿರುವವರು ಅಲ್ಪಸಂಖ್ಯಾತರಿಗೆ ಆದ ಅನ್ಯಾಯವನ್ನು ಖಂಡಿಸಲು ತುಟಿಪಿಟಿಕ್ ಎನ್ನಲಿಲ್ಲ, ಈ ಚುನಾವಣೆ ಸಂದರ್ಭದಲ್ಲಿ ಹಣ ಮತ್ತು ಇತರೆ ಅಮಿಷಗಳನುವೊಡ್ಡಿ ಮತ ಕೇಳಲು ಬರುತ್ತಾರೆ, ನೀವು ಅವರಿಗೆ ತಕ್ಕಪಾಠ ಕಲಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಬೂಡಾ ಅಧ್ಯಕ್ಷರಾದ ಹುಮಾಯೂನ್ ಖಾನ್ ಮತ್ತು ಕಾಂಗ್ರೆಸ್ ಪಕ್ಷದ ಮಖಂಡರಾದ ಅಲ್ಲಾ ಬಕಾಷ್, ಸೈಫುಲ್ಲಾ, ಸೋಮು, ಜಹೀರ್ ಭಾಯ್, ಗುಜರಿ ಬಸವರಾಜ್, ಖಲೀಮ್ ಬಾಯ್, ರಿಯಾಜ್, ಮೂಸಾ, ಚಿರಂಜೀವಿ, ಲ್ಯಾಬ್ ಮೂಸಾ, ಶ್ರೀನಿವಾಸ್ ಭಂಡಾರಿ ಫೈಝಲ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರಿದ್ದರು.