ನಗರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೇಶವ ರೆಡ್ಡಿ ಪ್ರಚಾರ.

Share and Enjoy !

Shares
Listen to this article

ಬಳ್ಳಾರಿ : ನಗರದ 20 ನೇ ವಾರ್ಡಿನ ಹುಸೇನ್ ನಗರ, ಹನುಮಾನ್ ನಗರ, ಸಾಯಿಬಾಬಾ ಗುಡಿ ಹತ್ತಿರ ಹಾಗೂ ಇತರೆ ವಾರ್ಡ ಗಳಲ್ಲಿ ಪಕ್ಷದ ಅಭ್ಯರ್ಥಿಯಾದ  ಕೊರಲಗುಂದಿ ದೊಡ್ಡ ಕೇಶವ ರೆಡ್ಡಿ,ಹಾಗೂ ಅವರ ಪುತ್ರಿಯಾದ ಮಂಜುಳಾ ಮನೋಹರ ರೆಡ್ಡಿ, ಅವರ ಕುಟುಂಬದವರಾದ ಶ್ರಾವಣಿ, ಪ್ರದೀಪ್ ರೆಡ್ಡಿ ಮತ್ತು ಬಳ್ಳಾರಿ ಮಹಾನಗರದ ಆಮ್ ಆದ್ಮಿ ಪಕ್ಷದ ಜಿಲ್ಲಾದ್ಯಕ್ಷರಾದ ಟಿ ಕಿರಣ್ ಕುಮಾರ್  ಭರ್ಜರಿ ಪ್ರಚಾರದೊಂದಿಗೆ ಮತಯಾಚನೆ ಮಾಡಿದರು.

ಬಳ್ಳಾರಿಯ ರಾಜಕೀಯದಲ್ಲಿ ಇದುವರೆಗೂ ಬಂದಂತಹ ಪಕ್ಷಗಳಿಂದ ಸಾರ್ವಜನಿಕರಿಗೆ ಬೇಕಾದ ಉತ್ತಮ ಸೌಲಭ್ಯಗಳ ಕಡೆ ಯಾವ ಪಕ್ಷವು ಸಹ ಗಮನ ನೀಡಿಲ್ಲ. ಇಂದಿನ ಕಣದಲ್ಲಿ ಎಲ್ಲರೂ ಕೋಟ್ಯಾಧೀಶರು ಬಳ್ಳಾರಿಯ ಜನರನ್ನು ಆಳಲೆಂದು ಬರುವವರೇ ಹೊರತು ಸಾರ್ವಜನಿಕರ ಕಷ್ಟ ಕೇಳಲು ಬರುವವರು ಯಾರು ಇಲ್ಲ  ಎಂದು ಅಭ್ಯರ್ಥಿ ಕೇಶವ ರೆಡ್ಡಿ ತಿಳಿಸಿದರು.

ಆದ ಕಾರಣ ಈ ಬಾರಿ ಒಮ್ಮೆ ಆಮ್ ಆದ್ಮಿ ಜನಸಾಮಾನ್ಯರಿಗಾಗಿ ಕಟ್ಟಿದ ಪಕ್ಷಕ್ಕೆ ನಿಮ್ಮ ಬೆಂಬಲ ನೀಡಿ ಹಾಗೂ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪೊರಕೆಯಿಂದ ಮಾತ್ರ ಸಾಧ್ಯ, ಒಮ್ಮೆ ಆಮ್ ಆದ್ಮಿ ಪಕ್ಷಕ್ಕೆ ಅವಕಾಶ ನೀಡಿ ಮತ್ತು ಜನಸಾಮಾನ್ಯರ ಮೂಲಭೂತ ಸೌಲಭ್ಯಗಳಿಗೆ ಯಾವುದೇ ಟ್ಯಾಕ್ಸ್ ಕಟ್ಟದಂತೆ ನಾವು ಮಾಡುವೆವು ಎಂದು ಕೇಶವರೆಡ್ಡಿಯವರು ಮತ ಯಾಚನೆ ಮಾಡಿದರು.

ಹಾಗೆಯೇ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ಎಲ್ಲಾ ಪಕ್ಷಗಳನ್ನು ಇದುವರೆಗೂ ನೀವು ನೋಡಿದ್ದೀರಾ ಈಗ ಒಂದು ಬಾರಿ ಆಮ್ ಆದ್ಮಿ ಪಕ್ಷಕ್ಕೆ ಅವಕಾಶ ಕೊಟ್ಟು ನೋಡಿ ಭ್ರಷ್ಟಾಚಾರದ ವ್ಯವಸ್ಥೆಯನ್ನು ಸರಿಪಡಿಸಿ ಪ್ರಜೆಗಳಿಗೆ ಉತ್ತಮ ಆಡಳಿತ ಮತ್ತು ಜೀವನ ನೀಡುವುದು ನಮ್ಮ  ಪಕ್ಷದ ಮೂಲ ಉದ್ದೇಶ ಎಂದು ಹೇಳಿದರು.

 

 

 

Share and Enjoy !

Shares