ಬಳ್ಳಾರಿ :ಬಳ್ಳಾರಿ ಸೈಕ್ಲಿಂಗ್ ಕ್ಲಬ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಜನರು ಪೆಟ್ರೋಲಿಯಂ ಉತ್ಪನ್ನಗಳನ್ನು ಮುಂದಿನ ಪೀಳಿಗೆಗಾಗಿ ಇರುವಂತೆ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು.ಸಣ್ಣ ಪುಟ್ಟ ಕೆಲಸಗಳಿಗೆ ಪೆಟ್ರೋಲ್, ಡೀಸಲ್ ಉತ್ಪನ್ನಗಳನ್ನು ಬಳಸಬಾರದು ಇದರಿಂದ ಪರಿಸರ ಹಾನಿ ಸಹ ಆಗುತ್ತದೆ ಎಂದರು.
ಬಳ್ಳಾರಿ ಸೈಕ್ಲಿಂಗ್ ಕ್ಲಬ್ ತಂಡವು ಗಣಿನಾಡು ಬಳ್ಳಾರಿ ನಗರದ ದುರ್ಗಮ್ಮ ದೇವಸ್ಥಾನದಿಂದ ರಾಯಲ್ ವೃತ್ತ, ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ, ಮೋತಿ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಮೊದಲನೇ ರೈಲ್ವೆ ಗೇಟ್, ಎರಡನೇ ರೈಲ್ವೆ ಗೇಟ್, ಸುಧಾ ಕ್ರಾಸ್ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ವರೆಗೆ ಸೈಕಲ್ ಜಾಥ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು.
ಈ ಸಮಯದಲ್ಲಿ ಬಳ್ಳಾರಿ ಸೈಕ್ಲಿಂಗ್ ಕ್ಲಬ್ ನ ತಂಡದ ಸದಸ್ಯರಾದ ಪ್ರಶಾಂತ,ಹರಿ ಶಂಕರ್, ಡಾ.ಬಿ.ಕೆ ಸುಂದರ್, ಗಿರೀಶ್ ಕುಮಾರ್ ಗೌಡ, ಗೌತಮ್, ಸಂದೀಪ್ ಶರ್ಮ, ಅಶೋಕ್ ಜೈನ್, ಡಾ.ಜಯಶ್ರೀ, ವಿಕಾಸ ಇನ್ನಿತರರು ಭಾಗವಹಿಸಿದ್ದರು.
ಈ ಸಮಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ ಪರಿಸರ ಸಂರಕ್ಷಣೆ ಮಾಡುವ ಪ್ರತಿಜ್ಞೆಯನ್ನು ಸೈಕ್ಲಿಂಗ್ ಪಟುಗಳು ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಅಧಿಕಾರಿಗಳು ಮಾಡಿದರು.
ಭಾಗವಹಿಸಿದ ಎಲ್ಲಾ ಸೈಕ್ಲಿಂಗ್ ಪಟುಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನ ಬಳ್ಳಾರಿ ವಿಭಾಗದ ಡಿವಿಜನ್ ಸೆಲ್ಸ್ ಮುಖ್ಯಸ್ಥ ಎ.ಶ್ರೀಕಾಂತ, ಸಹಾಯಕ ವ್ಯವಸ್ಥಾಪಕರು ಎ.ಹರೀಶ್ ರಾಜು ಭಾಗವಹಿಸಿದ್ದರು