ಗಂಗಾವತಿ : ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸಮಾಜ ಸೇವಕ ಮತ್ತು ವಾಣಿಜ್ಯೋದ್ಯಮಿ ಟಪಾಲ್ ಗಣೇಶ ಅವರು ಮಾತನಾಡಿ ಪ್ರಸಕ್ತ ಚುನಾವಣೆಯಲ್ಲಿ ಅಕ್ರಮ ಗಣಿಗಾರಿಕೆಯ ಆರೋಪ ಹಿನ್ನೆಲೆಯ ಜಿ. ಜನಾರ್ಧನರೆಡ್ಡಿಯು ಸ್ಪರ್ಧಿಸುತ್ತಿದ್ದು, ಇವರು ಓಬಳಾಪುರಂ ಮೈನಿಂಗ್ ಕಂಪನಿಯ ಸಂಸ್ಥಾಪಕರಾಗಿದ್ದು, ಆಂಧ್ರಪ್ರದೇಶದ ಸರ್ಕಾರದ ಅನುಮತಿ ಪಡೆದಿದ್ದು, 2008 ರಲ್ಲಿ ಕರ್ನಾಟಕದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಗಡಿಭಾಗದ ಗಿರಿಜನರ ಆರಾಧ್ಯ ದೈವ ವಾಗಿದ್ದ ಸುಂಕಲಮ್ಮ ದೇವಸ್ಥಾನವನ್ನು ಧ್ವಂಸಗೊಳಿಸಿ ಕೆಳಗಡೆ ಇದ್ದ ಖನಿಜ ಸಂಪತ್ತನ್ನು ಹಾಗೂ ಕರ್ನಾಟಕ’ ಗಡಿಯನ್ನು ಧ್ವಂಸಮಾಡಿ ಗಡಿಯನ್ನು ಒತ್ತುವರಿ ಮಾಡಿ ಆಂಧ್ರದ ಪರ್ಮಿಟ್ ಮೂಲಕ ಲೂಟಿ ಮಾಡಿ ಸಾವಿರಾರು ಕೋಟಿಯ ಅಕ್ರಮ ಆಸ್ತಿಯನ್ನು ಸಂಪಾದಿಸಿದ್ದಾರೆ.
ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದವರು ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅನ್ನುವ ಹೆಸರಿನಲ್ಲಿ ಪಕ್ಷ ಸ್ಥಾಪಿಸಿರುವುದು ಹಾಸ್ಯಾಸ್ಪದವಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ, ನಾಡಿನ ಅಭಿವೃದ್ಧಿಗೆ ಹೋರಾಡಿ ಪ್ರಕರಣಗಳನ್ನು ಎದುರಿಸುತ್ತಿಲ್ಲ, ಬದಲಾಗಿ, ಎಲ್ಲವೂ ಅಕ್ರಮ ಗಣಿಗಾರಿಕೆಯ ಪ್ರಕರಣಗಳಾಗಿವೆ. ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದವರು ಕರ್ನಾಟಕವನ್ನು ಅಭಿವೃದ್ಧಿ ಮಾಡ್ತಾರೆಯೇ…? ಮಂತ್ರಿ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಇಂತಹವರು ಗಂಗಾವತಿಗೆ ಬೇಕಾ …? ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಇವರು ವಿಧಾನಸೌಧಕ್ಕಲ್ಲ, ನೇರ ಜೈಲಿಗೆ ಹೋಗಬೇಕಾದವರು. ಅವರ ಮೇಲಿರುವ ಪ್ರಕರಣಗಳು ಒಂದೆರಡಲ್ಲ. ಜೈಲಿಗೆ ಹೋಗುವುದು ಶತಶಿದ್ದ, ಇಂತಹ ವ್ಯಕ್ತಿಗೆ ಮತವೇಕೆ ಕೊಡುತ್ತೀರಿ ಮತದಾರರೇ… ಸ್ಥಳೀಯವಾಗಿ ಲಭ್ಯರಿರುವ ವ್ಯಕ್ತಿಗೆ ಮತ ನೀಡಿ,
ಇಲ್ಲಿರುವ ನೈಸರ್ಗಿಕ ಸಂಪತ್ತನ್ನು ದೋಚುವ ಮೊದಲು ಏಳಿ, ಎಚ್ಚರಗೊಳ್ಳಿ, ಅವರ ಫುಟ್ಬಾಲ್ ಚಿಹ್ನೆಗೆ ಮತ ನೀಡಬೇಡಿ. ತಿರಸ್ಕರಿಸಿ,
ಎಂದು ಕರೆ ನೀಡಿದರು.ಗಂಗಾವತಿಯ ಮುಗ್ಧ, ಅಮಾಯಕ ಜನತೆ ಮೋಸಗೊಳ್ಳಬಾಂದು ಎನ್ನುವ ಕಾರಣಕ್ಕೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಬಳ್ಳಾರಿ ಜಿಲ್ಲೆಯ ಸಂಪತ್ತು ನಾಶವಾದಂತೆ ನಿಮ್ಮ ಸಂಪತ್ತು ನಾಶವಾಗಬಾರದು. ಕಾರಣ, ನಿಮ್ಮೂರಿನ ನಿಮ್ಮ ಸಮಸ್ಯೆಗೆ ಸ್ಪಂದಿಸುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಿ. ಎಂದು ಅಕ್ರಮಗಣಿಗಾರಿಕೆ ವಿರುದ್ಧ ಹರಿಹಾಹಿದರು. ಮುಂದುವರೆದು ಮಾತನಾಡಿದ ಅವರು ಕನ್ನಡ. ನೆಲ. ಜಲ. ಭಾಷೆ.ಗಡಿ ಸೇವೆ. ಮಾಡುವವರು ರಕ್ಷಣಾ ವೇದಿಕೆಯವರು ಇಂಥವರಿಂದ ದೂರ ಬರಬೇಕೆಂದು ಮನವಿ ಮಾಡಿಕೊಂಡರು.