10 ಬೂತ್ ಗಳಲ್ಲಿ ಏಕಕಾಲಕ್ಕೆ ಭರತ್ ರೆಡ್ಡಿ ಪರ ಪ್ರಚಾರ

Share and Enjoy !

Shares
Listen to this article

ಬಳ್ಳಾರಿ:ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.21ರಲ್ಲಿ ಗುರುವಾರ ಬೆಳಿಗ್ಗೆಯಿಂದ ವಾರ್ಡ್ ನ 10 ಬೂತ್ ಗಳಲ್ಲಿ ಏಕಕಾಲಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ನಾರಾ ಭರತ್ ರೆಡ್ಡಿಯವರ ಪರ ಪ್ರಚಾರ ಮಾಡಿದರು.

21ನೇ ವಾರ್ಡ್ ನ ಬಸವೇಶ್ವರ ನಗರ, ನೆಹರೂ ಕಾಲೋನಿ, ಕಾಲುವೆ ಗಡ್ಡೆ ಪ್ರದೇಶ ಸೇರಿದಂತೆ ಎಲ್ಲಾ ಪ್ರದೇಶಗಳ 10 ಬೂತ್ ಗಳಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತರು ಏಕ ಕಾಲಕ್ಕೆ ಪ್ರಚಾರ ಕೈಗೊಂಡು ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಲಾಯಿತು.

ಈ ಸಮಯದಲ್ಲಿ  ನೆಹರೂ ಕಾಲೋನಿಯ ಬಳಿ ಕಾಂಗ್ರೆಸ್‌ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರು ಕೂಡ ಪ್ರಚಾರ ಕಾರ್ಯದಲ್ಲಿ ಜೊತೆಗೂಡಿ ಮನೆ ಮನೆಗೆ ತೆರಳಿ ತಮ್ಮನ್ನು ಬೆಂಬಲಿಸುವಂತೆ ಮತ ಯಾಚಿಸಿದರು.

ಬಳ್ಳಾರಿ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮಗೆ ಆಶೀರ್ವದಿಸಿ ಮತ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಈ ಸಮಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಮಂಜುಸ್ವಾಮಿ, ಹಿರೇಮಠ, ವಾಸು ರೆಡ್ಡಿ, ಅಶೋಕ್ ರೆಡ್ಡಿ, ಪಂಪಣ್ಣ, ಪ್ರಭಾಕರ ರೆಡ್ಡಿ, ಗುರುಪ್ರಸಾದ್ ರೆಡ್ಡಿ, ಅಂಗಡಿ ಶಂಕರ್, ಕಾಲುವೆಗಡ್ಡೆ ಸೂರಿ, ದುರ್ಗಮ್ಮ ಗುಡಿ ದುರ್ಗಣ್ಣ, ಗುಂಡ ಸೇರಿದಂತೆ ಹಲವರು ಪ್ರಚಾರ ಕಾರ್ಯದ ನೇತೃತ್ವ ವಹಿಸಿದ್ದರು.

 

Share and Enjoy !

Shares