ಮೋದಿ ಸಮಾರಂಭ: ಮಳೆಯಿಂದ ನೆಲವೆಲ್ಲ ಕೆಸರುಗದ್ದೆ.

Share and Enjoy !

Shares
Listen to this article

ಬಳ್ಳಾರಿ : ಮೂರು ಹೆಲಿಪ್ಯಾಡ್ ಸ್ಥಳ ಪರೀಶಿಲನೆ ಮಾಡಿದ ವಿಮಾನ ಅಧಿಕಾರಿಗಳು‌. ಇಂದು ಗಣಿನಾಡು ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯಲ್ಲಿ ಇರುವ ಸತ್ಯಂ ಇಂಟರ್ನ್ಯಾಷನಲ್ ಶಾಲೆಯ ಮುಂಭಾಗದಲ್ಲಿ ಇರುವ 50 ಎಕರೆ ಜಮೀನಿನ ಮೈದಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 2 ಗಂಟೆಗೆ ಬಿಜೆಪಿ ಪಕ್ಷದ ಬಳ್ಳಾರಿ ಜಿಲ್ಲೆಯ ಅಭ್ಯರ್ಥಿಗಳ ಪರವಾಗಿ ಸಾರ್ವಜನಿಕ ಬಹಿರಂಗ ಸಮಾರಂಭ ನಡೆಯುತ್ತದೆ. ಆದರೆ ಅದಕ್ಕೆ ಮಳೆರಾಯನ ಅಡ್ಡಿ, ಸಮಾರಂಭ ಮತ್ತು ಹೆಲಿಪ್ಯಾಡ್ ಸುತ್ತಲೂ ಮಳೆ ನೀರು, ಕೆಸರು ಗದ್ದೆಯಾದ ಸ್ಥಳ.

ಪಾರ್ಕಿಂಗ್ ಸ್ಥಳ ಮತ್ತು ವೇದಿಕೆ ಅಕ್ಕ ಪಕ್ಕದ ನೆಲೆ ಕೆಸರು ಗದ್ದೆ: ಶುಕ್ರವಾರ ಬೆಳಗಿನ ಜಾವ 4 ಗಂಟೆಯಿಂದ 5 ಗಂಟೆ 30 ನಿಮಿಷದವರೆಗೆ ಸುರಿದ ನಿರಂತರ ಜಿಟಿಜಿಟಿ ಮಳೆಯಿಂದಾಗಿ ವೇದಿಕೆಯ ಅಕ್ಕ ಪಕ್ಕ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಮಳೆ ನೀರು ನಿಂತು ಕೆಸರು ಗದ್ದೆ ಯಾಗಿದೆ.ಇನ್ನು ಸಮಾರಂಭಕ್ಕೆ ಬರುವ ಬಿಜೆಪಿಯ ಕಾರ್ಯಕರ್ತರು, ಜನರು ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಸಮಸ್ಯೆ ಆಗುತ್ತದೆ. ಇನ್ನು ರೋಡ್ ರೋಲರ್ ಗಳ ಮೂಲಕ ನೆಲವನ್ನು ಸಮಮಾಡುತ್ತಿದ್ದರು.

ಹೆಲಿಪ್ಯಾಡ್ ಸ್ಥಳ ಪರೀಶಿಲನೆ ಮಾಡಿದ ಅಧಿಕಾರಿಗಳು: ಬೆಳಿಗ್ಗೆ 8 ಗಂಟೆಗೆ ಒಂದು ಹೆಲಿಕ್ಯಾಪ್ಟರ್ ಡೆಮೊ ನಡೆಸಿದರು‌.ಈ ಸಮಯದಲ್ಲಿ ಮೂರು ಹೆಲಿಪ್ಯಾಡ್ ಗಳಲ್ಲಿ ನಿಲ್ಲಿಸಿ ಸ್ಥಳವನ್ನು ತಪಾಸಣೆ ಮಾಡಿದರು. ಈ ಸಮಯದಲ್ಲಿ ಹೆಲಿಪ್ಯಾಡ್ ಸುತ್ತಲೂ ಹಾಕಿದ ಬ್ಯಾರಿಕೆಟ್ ಗಳು ಗಾಲಿಗೆ ಹಾರಿ ಬಿದ್ದರು. ಮೂರು ಹೆಲಿಪ್ಯಾಟ್ ಇರುವ ಸ್ಥಳವನ್ನು  15 ನಿಮಿಷಕ್ಕೂ ಹೆಚ್ಚಿನ ಸಮಯ ತಪಾಸಣೆ ಮಾಡಿದರು. ಇನ್ನು ಸಮಾರಂಭದ ಸುತ್ತಲೂ ಹಾಕಿದ ಕೆಲ ಬಿಜೆಪಿಯ ಭಾವುಟಗಳು ಸಹ ಮಳೆ , ಗಾಳಿಗೆ ಕೆಳಗೆ ಬಿದ್ದಿದ್ದವು.

ಈ ಸಮಯದಲ್ಲಿ ಬಳ್ಳಾರಿ ಎಸಿ ಹೇಮಂತ ಕುಮಾರ್, ಬಿಜೆಪಿಯ ಜಿಲ್ಲಾ ಅಧ್ಯಕ್ಷ ಮುರಹರ ಗೌಡ್ರ, ಅಗ್ನಿ ಶಾಮಕದಳದ, ಪೊಲೀಸ ಇಲಾಖೆಯ, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯದಲ್ಲಿ ಇದ್ದರು.

Share and Enjoy !

Shares