ಬಳ್ಳಾರಿ :ಬಳ್ಳಾರಿ ನಗರದಲ್ಲಿ ಶುಕ್ರವಾರ ಸಾಯಂಕಾಲ ಹುಸೇನ್ ನಗರ, ಎಪಿಎಂಸಿ, ವಿದ್ಯಾನಗರ, ಇಂದಿರಾನಗರದಲ್ಲಿ ಕೆ.ಆರ್.ಪಿ.ಪಿಯಿಂದ ಬಹಿರಂಗ ಸಭೆ ನಡೆಸಲಾಯಿತು.
ಸಭೆಯಲ್ಲಿ ನೆರೆದಿದ್ದ ಸಹಸ್ರ ಸಂಖ್ಯೆಯ ಜನಸ್ತೋಮ ಜಯಘೋಷ ಮೊಳಗಿಸಿದರು ಅವರ ಅಭಿಮಾನ ನೋಡಿದಾಗ ಮನತುಂಬಿ ಆನಂದವಾಯಿತು ಎಂದರು
ಬಳ್ಳಾರಿಯ ಅಭಿವೃದ್ಧಿಯೇ ನಮ್ಮ ಮೂಲಮಂತ್ರ ವಿಶೇಷವಾಗಿ ಮೂಲಸೌಕರ್ಯಗಳಾದ ಒಳಚರಂಡಿ, ನೀರು, ರಸ್ತೆಯ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಬಳ್ಳಾರಿಯ ರಿಂಗ್ ರಸ್ತೆ, ಬಡವರಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಹಾಗೂ ಪ್ರಣಾಳಿಕೆಯ ಅಂಶಗಳನ್ನು ಜಾರಿಗೆ ತರಲಾಗುವುದು.
ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಗೋನಾಳ ರಾಜಶೇಖರ ಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೇಮಲತ, ಬ್ರಹ್ಮಿಣಿ, ಮಹಿಳಾ ಘಟಕದ ಅಧ್ಯಕ್ಷೆ ಹಂಪಿರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಲ್ಲಿಕಾರ್ಜುನ ಆಚಾರ್, ಪಕ್ಷದ ಮುಖಂಡರಾದ ಕೋನಂಕಿ ರಾಮಪ್ಪ, ಕೋನಂಕಿ ತಿಲಕ್, ಶ್ರೀ ವೆಂಕಟರಮಣ, ಸೂರಿಬಾಬು, ರಮೇಶ್ ರೆಡ್ಡಿ, ಕೊಳಗಲ್ ಅಂಜಿನಿ, ರೂಪ, ಗೀತಾರಾಮ್, ರಾಜೇಶ್ವರಿ ಇನ್ನು ಅನೇಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.