ಬಳ್ಳಾರಿ:ಬಳ್ಳಾರಿ ನಗರದ 17 ನೇ ವಾರ್ಡಿನ ಗೋನಾಳ್ ಬಾಗದ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಹುಲಿ ಮಾನಪ್ಪ ಈ ಹಿಂದೆ 17ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಚಂದ್ರಕಲಾ ಶ್ರೀ ಹುಲಿ ಮಾನಪ್ಪ ಬಿಜೆಪಿ ಪಕ್ಷ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಯಾದರು.
ಈ ಸಮಯದಲ್ಲಿ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೇಮಲತಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹಂಪಿರಮಣ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಆಚಾರ್ ಪಕ್ಷದ ಮುಖಂಡರಾದ ರಾಮಣ್ಣ ಕೊಳಗ ಅಂಜಿನಿ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.