ಗಣೇಶ್ ರವರ ಪರ ಮತ ಪ್ರಚಾರ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ಕಂಪ್ಲಿ:ಭಾನುವಾರ ಬೆಳಿಗ್ಗೆ ಕಂಪ್ಲಿ ಸಮೀಪದ ಹೊಸ  ನೆಲ್ಲೂಡಿ ಗ್ರಾಮ ಪಂಚಾಯತಿಯ ಮೆಹಬೂಬ್ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಾಗೂ ಕಾಂಗ್ರೆಸ್ ಮುಖಂಡರಿಂದ ಜೆ.ಎನ್.  ಗಣೇಶ್ ರವರ ಪರ ಮತಯಾಚನೆ ಮಾಡಿದರು..

ಈ ಸಂದರ್ಭದಲ್ಲಿ ಮಾತನಾಡಿದ ಸುಭಾನ್ ಭಾಷ ಹೊಸ ನೆಲ್ಲೂಡಿ ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ಕಾಂಗ್ರೆಸ್ ಪರವಾಗಿ ಇದೆ, ಹತ್ತು ವರ್ಷಗಳಲ್ಲಿ ಆಗಿದೆ ಅಭಿವೃದ್ದಿ ಕಾರ್ಯಗಳು ಕೇವಲ  ಐದು ವರ್ಷದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಪರೋಕ್ಷವಾಗಿ ಮಾಡಿದ್ದಾರೆ..

ನಮ್ಮ  ಕ್ಷೇತ್ರದಲ್ಲಿ ಕಂಪ್ಲಿ ಹಾಗೂ ಕುರುಗೋಡು ತಾಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಎರಡು ಮನೆ ಮಾಡಿ ಜನರ ನಡುವೆ ಜನಸಾಮಾನ್ಯರಂತೆ ನಮ್ಮ ಶಾಸಕರು, ನಮ್ಮ ಮನೆ ಮಗ ಜೆ.ಎನ್. ಗಣೇಶ ಅಣ್ಣ, ಶಾಸಕರು ಬಂದಿರುವುದು ಬರಿ ಅಧಿಕಾರಕ್ಕಾಗಿ ಅಲ್ಲ, ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕಂಪ್ಲಿ  ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ… ಖಂಡಿತವಾಗಿಯೂ ಜೆ.ಎನ್. ಗಣೇಶ ಅಣ್ಣನವರು  ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ ಎಂದು ಧ್ವನಿ ಎತ್ತಿದರು…

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್ ಸೋಮನಗೌಡ, ಹೆಚ್.ಮಂಜುನಾಥ್ ಗೌಡ, ಚೌಡ್ಕಿ ವೀರಭದ್ರಪ್ಪ, ಸಾಂಬರೆಡ್ಡಿ, ಪ್ರಕಾಶ, ಗ್ರಾಮ ಪಂಚಾಯತಿ ಸದಸ್ಯರಾದ ರಾಮ್ ತಕ್ಕ,  ಕೆ.ಉಮೇಶ,  ಇಸ್ಮಲ್, ನಾಯಕ ಉಮೇಶ, ಜೆ.ಎನ್. ಗಣೇಶ್ ಅಣ್ಣನ ಅಭಿಮಾನಿಗಳು ಮತ್ತು ಯುವಕರು ಸಹ ಉಪಸ್ಥಿತರಿದ್ದರು..

 

Share and Enjoy !

Shares