ವಿಜಯನಗರ ವಾಣಿ ಸುದ್ದಿ
ಕಂಪ್ಲಿ:ಸೋಮವಾರ ಪ್ರಕಟಿಸಲಾದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ನಿವೇದಿತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಸತತ ಐದನೇ ವರ್ಷ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದಿದ್ದು, 2017-18 ನೇ ಸಾಲಿನಿಂದ 2022-23 ನೇ ಸಾಲಿನ ವರೆಗೂ ಕಂಪ್ಲಿಯ ನಿವೇದಿತಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಸತತವಾಗಿ ಐದನೇ ವರ್ಷ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದಿರುತ್ತದೆ..
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಹೆಚ್ ಮರಿಯಪ್ಪನವರು ಮಾತನಾಡಿ ನಮ್ಮ ಶಾಲೆಯಲ್ಲಿ ಒಟ್ಟು 24 ಮಕ್ಕಳು ಎಸ್.ಎಸ್.ಎಲ್.ಸಿ
ಪರೀಕ್ಷೆಯನ್ನು ಬರೆದಿದ್ದಾರೆ, ಇದರಲ್ಲಿ 7 ಮಕ್ಕಳು ಡಿಸ್ಟಿಂಕ್ಷನ್, 15 ಪ್ರಥಮ ಸ್ಥಾನ ಹಾಗೂ 2 ಮಕ್ಕಳು ದ್ವಿತೀಯ ಸ್ಥಾನ ಪಡೆದಿದ್ದು, ನಮ್ಮ ಶಾಲೆಯು ಸತತ ಐದನೇ ವರ್ಷ ಶೇಕಡಾ 100% ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ…
ನಮ್ಮ ಶಾಲೆಯಲ್ಲಿ ಪ್ರಥಮ ಸ್ಥಾನ, ರಮೇಶ್.ಟಿ 582/625 93.12% (ಎ+ ಗ್ರೇಡ್)ದ್ವಿತೀಯ ಸ್ಥಾನ, ಜೆ. ಜ್ಯೋತಿ , 575/625 92% (ಎ+ ಗ್ರೇಡ್) ತೃತೀಯ ಸ್ಥಾನ, ವೈ ನಂದಿತಾ ಹಾಗೂ ಎಸ್.ಮೊಹಿದ್ದೀನ್. 562/625 89.92% (ಎ, ಗ್ರೇಡ್,)ನಮ್ಮ ನಿವೇದಿತ ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ..
ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಮ್ಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಹೆಚ್ ಮರಿಯಪ್ಪ ಹಾಗೂ ಕಾರ್ಯದರ್ಶಿಯಾದ ಕೆ ರಾಮುರವರು, ಮತ್ತು ಎಲ್ಲ ಶಿಕ್ಷಕ/ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಪಾಲಕ-ಪೋಷಕರ ಸಹಕಾರ ಪ್ರೋತ್ಸಾಹದೊಂದಿಗೆ ಉತ್ತಮ ಫಲಿತಾಂಶವನ್ನು ಪಡೆದಿರುತ್ತೆವೆ..
ವಿಶೇಷವಾಗಿ ನಮ್ಮ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಎಂ. ಪುಪ್ಪ ಮೇಡಂ ರವರ ಸತತ ಪರಿಶ್ರಮವೇ ನಮ್ಮ ಶಾಲೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ..
ನಮ್ಮ ಶಾಲೆಯ ಕಾರ್ಯದರ್ಶಿ ಕೆ. ರಾಮುರವರು ಸಹ ನನ್ನ ಮೇಲೆ ಭರವಸೆ ಇಟ್ಟು , ಶಾಲೆಯ ಸಂಪೂರ್ಣ ಜವಾಬ್ದಾರಿ ಹಾಗೂ ಸಹಕಾರ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು…
ನಮ್ಮ ಶಾಲೆಯಲ್ಲಿ ನರ್ಸರಿ ಯಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೂ ಆಂಗ್ಲ ಭಾಷೆ ಮಾತನಾಡುವ ಕೌಶಲ್ಯ ಅದ್ಬುತವಾಗಿ ರೂಢಿಲಾಗಿದೆ. ಮಕ್ಕಳಿಗೆ ಬೇಕಾದ ಮೌಲ್ಯಯುತ ಶಿಕ್ಷಣ, ಶಿಸ್ತು, ಸೌಮ್ಯತೆ, ಸೃಜನಶೀಲ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಮಾಡುವಲ್ಲಿ ನಮ್ಮ ಶಾಲೆಯು ಯಶಸ್ವಿಯಾಗಿದೆ ಹಾಗೂ ನಮ್ಮ ಶಾಲೆ ಮುಂದಿನ ದಿನಗಳಲ್ಲಿ ಕಂಪ್ಲಿಯಲ್ಲಿ ಉತ್ತಮ ಫಲಿತಾಂಶ ನೀಡುವ ಭರವಸೆಯನ್ನು ಹೊಂದಿದ್ದೇವೆ ಎಂದು ತಿಳಿಸಿದರು…
ಈ ಸಂದರ್ಭದಲ್ಲಿ ನಿವೇದಿತ ಶಾಲೆಯ ಮುಖ್ಯ ಪಗುರುಗಳಾದ ಹೆಚ್ ಮರಿಯಪ್ಪ, ಕಾರ್ಯದರ್ಶಿಗಳಾದ ಕೆ ರಾಮು ಮತ್ತು ಎಲ್ಲ ಶಿಕ್ಷಕ ಶಿಕ್ಷಕಿಯರ ಮತ್ತು ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಮಕ್ಕಳು ಸಹ ಉಪಸ್ಥಿತರಿದ್ದರು….