ಮತದಾರರ ಪಟ್ಟಿಯಿಂದ ಮತದಾರರ ಹೆಸರೇ ನಾಪತ್ತೆ 1200 ಮತದಾರರ ಹೆಸರೇ ಇಲ್ಲ ? , ಬದುಕಿದ್ದವರನ್ನೂ ಕೊಂದ ಅಧಿಕಾರಿಗಳು.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ಕುರುಗೋಡು:2023 ರ ವಿಧಾನಸಭೆ ಚುನಾವಣೆ ಇನ್ನೇನು ಒಂದು ದಿನ ಮಾತ್ರ ಬಾಕಿ ಉಳಿದಿದ್ದು ಚುನಾವಣೆ ಆಯೋಗ   ಮತದಾನಕ್ಕೆ ಸಕಲ ಸಿದ್ದತೆ ನಡೆಸುತ್ತಿದೆ.ಇನ್ನೂ ಕಂಪ್ಲಿ ಪಟ್ಟಣದ ಕುರುಗೋಡಿನಲ್ಲಿ ಮತಹಾಕಲು ಉತ್ಸಾಹಕರಾಗಿದ್ದ ಮತದಾರರಿಗೆ ಶಾಕ್ ಎದುರಾಗಿದ್ದು ಮತದಾರರ ಪಟ್ಟಿಯಿಂದ ಬಹುತೇಕ ಮತದಾರರ ಹೆಸರು ನಾಪತ್ತೆಯಾಗಿದ್ದು ಈಗ ಮತದಾರರು ತಹಶಿಲ್ದಾರರ ಕಚೇರಿಗೆ ಭೇಟಿ ನೀಡಿ ನ್ಯಾಯ ನೀಡಬೇಕೆಂದು ಧರಣಿ ನೆಡೆಸುತ್ತಿದ್ದಾರೆ.

ಸದ್ಯ ಪಟ್ಟಣದ ಬಹುತೇಕ ವಾರ್ಡ್ಗಳಲ್ಲಿ 100-150  ಮತದಾರರ ಹೆಸರು ಕಾಣೆಯಾಗಿದೆ.

ಒಟ್ಟಾರೆ 1200 ಮತದಾರರ ಹೆಸರು ನಾಪತ್ತೆಯಾಗಿವೆ  ಅಂದಾಜಿಸಲಾಗಿದೆ.

ಕಳೆದ ವರ್ಷ ನಡೆದ ಪುರಸಭೆ ಚುನಾವಣೆಯಲ್ಲಿ 23 ವಾರ್ಡ್ ಗಳಲ್ಲಿ  ಕುರುಗೋಡು ಪಟ್ಟಣದಲ್ಲಿ ಒಟ್ಟು 16500 ಮತಗಳಿದ್ದು  ಈಗ

15300 ಮತಗಳು ಮಾತ್ರ ಇವೆ.1200 ಮತಗಳು ಕಾಣೆಯಾಗಿವೆ.

 

ಕಾಣೆಯಾದ ಮತದಾರರ ಕಥೆ ಏನು ?

ಸದ್ಯ 1200 ಮತಗಳು ಮತದಾರ ಪಟ್ಟಿಯಿಂದ ಕಾಣೆಯಾಗಿದ್ದು.

ಇವರಿಗೆ ಈ ಬಾರಿ ಮತದಾನದ ಹಕ್ಕಿಲ್ಲ. ಚುನಾವಣಾಧಿಕಾರಿಗಳಿಗೆ ಕರೆ ಮಾಡಿದ್ದೇವೆ ಎಂದು ತಹಶಿಲ್ದಾರ್ ಗುರುರಾಜ ಛಲವಾದಿ ತಿಳಿಸಿದ್ದಾರೆ.

ಬಿ.ಎಲ್.ಓ ಗಳು ಮಾಡಿದ್ರಾ ಎಡವಟ್ಟು

ಅಂಗನವಾಡಿ ಕಾರ್ಯಕರ್ತೆಯರು ಬಿ.ಎಲ್.ಓ ಗಳಾಗಿ ಕಾರ್ಯನಿರ್ವಹಿಸಿದ್ದು, ಬೇಕಾಬಿಟ್ಟಿ ಮತದಾರರ ಪಟ್ಟಿಯನ್ನು ತಯಾರಿಸಿದ್ದಾರೆ.

ಇವರು ಯಾರ ಮನೆಗಳಿಗೂ ಭೇಟಿ ನೀಡದೇ ತಮಗೆ ತಿಳಿದಂತೆ  ವರ್ತಿಸಿ ಊರಿಗೆ ಹೋದವರು,ದುಡಿಯಲು ಗುಳೆ ಹೋದವರು ಮತ್ತು ಮನೆಯಲ್ಲಿಯೇ ಇದ್ದವರ  ಹೆಸರು ಕೈಬಿಡಲು ಕಾರಣವೇನು ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು ಕಂಡು ಬಂತು.

ಹೇಳಿಕೆ

 

ಮತದಾರರ ಪಟ್ಟಿಯಿಂದ ಕೆಲವರನ್ನು ಕೈ ಬಿಟ್ಟ ವಿಚಾರ ಗಮನಕ್ಕೆ ಬಂದಿದೆ.99% ಮತದಾನ ಮಾಡಲು ಸಾಧ್ಯವಿಲ್ಲ.

ಬಿ.ಎಲ್.ಓ ಗಳ ಸಭೆ ಕರೆದು ಮಾತನಾಡಿದ್ದೇನೆ.ಚುನಾವಣಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇನೆ,ಸಾಧ್ಯಸಾಧ್ಯತೆ ತಿಳಿದು ಮಾಹಿತಿ ನೀಡುತ್ತೇನೆ.

 

ಗುರುರಾಜ ಛಲವಾದಿ

ತಹಶಿಲ್ದಾರರು

ಕುರುಗೋಡು.

Share and Enjoy !

Shares