ಮತದಾನ ಕೇಂದ್ರದಲ್ಲಿಯೇ ಮಹಿಳೆಗೆ ಹೆರಿಗೆ,ಗಂಡು ಮಗು ಜನನ*

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ಕುರುಗೋಡು:ಕುರುಗೋಡು ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿನ ಮತದಾನ ಕೇಂದ್ರ   228 ರಲ್ಲಿ  ಮತದಾನ ಮಾಡಲು ಬಂದು ಮಹಿಳೆಯೊಬ್ಬಳಿಗೆ  ಚುನಾವಣೆ ಕೇಂದ್ರದಲ್ಲಿಯೇ ಹೆರಿಗೆಯಾದ ವಿಶೇಷ ಘಟನೆ ಬುಧವಾರ ಜರುಗಿದೆ.

ಹೆರಿಗೆಯಾದ ಮಹಿಳೆಯ ಹೆಸರು  ಶ್ರೀಮತಿ ಮಣಿಲಾ ಎಂಬುದಾಗಿದ್ದು ತುಂಬು ಗರ್ಭಿಣಿಯಾದ  ಇವರು ಮೆ10 ರಂದು  ಬೆಳಿಗ್ಗೆ  10.೦೦ ಕ್ಕೇ  ಮತದಾನ ಮಾಡಲು ಮತದಾನ ಕೇಂದ್ರಕ್ಕೆ ಆಗಮಿಸಿದಾಗ  ಹೆರಿಗೆ ನೋವು ಕಾಣಿಸಿಕೊಂಡಿದೆ ತಕ್ಷಣವೇ ಅವರನ್ನು ಪಕ್ಕದ ಕೊಠಡಿಯಲ್ಲಿ ಆರೈಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಆಕೆಗೆ   ಸಾಮಾನ್ಯ ಹೆರಿಗೆ ಆಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ  ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಈ ಸಂದರ್ಭದಲ್ಲಿ ಮಾನ್ಯ ಸೆಕ್ಟ್ರಲ್ ಅಧಿಕಾರಿ ಯವರಾದ ವೆಂಕಟೇಶ್ ರಾಮಚಂದ್ರಪ್ಪ ಇವರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಿದರು. ಸದರಿ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಅಧಿಕಾರಿ,ಗ್ರಾಮ ಲೆಕ್ಕಿಗರು ಹಾಜರಿದ್ದರು

 

Share and Enjoy !

Shares