ವಿಜಯನಗರವಾಣಿ
ಬಳ್ಳಾರಿ :ಇಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಬಳ್ಳಾರಿಯ ಶತಾಯುಷಿಯೊಬ್ಬರು ಮತಗಟ್ಟೆಗೆ ತೆರಳಿ ಮತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದ ಕೆಕೆಆರ್ ಟಿಸಿ ಡಿಪೋದ ಪೋಲಿಂಗ್ ಬೂತ್ ಮತಗಟ್ಟೆಯಲ್ಲಿ ಹೆಚ್.ಎಂ.ಶಾಂತವೀರಮ್ಮ (100) ಎನ್ನುವ ಅಜ್ಜಿ ಉತ್ಸಾಹದಿಂದ ಬಂದು ಮತದಾನ ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಶಾಂತವೀರಮ್ಮ ಸಂವಿಧಾನ ಜನತೆಗೆ ಕೊಟ್ಟ ಮತದಾನ ಎಂಬ ಈ ಅಸ್ತ್ರವನ್ನು ಸರಿಯಾಗಿ ಬಳಸಿ,ಸಮರ್ಥ, ದಕ್ಷ,ಉತ್ತಮ ಗುಣ ಹೊಂದಿರುವ ನಾಯಕರನ್ನು ಆಯ್ಕೆ ಮಾಡಬೇಕು.ಹಣ,ಹೆಂಡ,ಸೀರಿಗೆ ಮತದಾನ ಮಾರಿಕೊಳ್ಳಬೇಡಿ.
ನಾನು ಮತದಾನ ಮಾಡಿದ್ದೇನೆ, ನೀವು ಬನ್ನಿ ನಿಮ್ಮವರನ್ನು ಕರೆ ತಂದು ಮತದಾನ ಮಾಡಿ ಎಂದ ಅಜ್ಜಿ ಯುವ ಮತದಾರರಿಗೆ ಸಂದೇಶ ಸಾರಿದ್ದಾರೆ.