ಬಳ್ಳಾರಿ: ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರ ಮತ್ತೆ ಮಾಜಿ ಶಾಸಕ ಸುರೇಶ್ ಬಾಬುಗೆ ಸೋಲಿನ ರುಚಿಯನ್ನು ಉಣಿಸಿದ್ದು. ಸಾಮಾನ್ಯ ಜನರೊಡನೆ ಬೆರೆಯುವ, ರಾತ್ರಿ ವೇಳೆಯಲ್ಲೂ ಜನರ ಕರೆ ಸ್ವೀಕರಿಸಿ ಸ್ಪಂದಿಸುವ ಶಾಸಕ ಜೆ.ಎನ್.ಗಣೇಶ್ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ….ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
ಸ್ವತಃ ಗಣೇಶ್ ಸಹ ಈ ಮಟ್ಟಿನ ಭರ್ಜರಿ ಗೆಲುವು ದೊರೆಯುತ್ತದೆಂಬ ನಿರೀಕ್ಷೆ ಹೊಂದಿರಲಿಲ್ಲ
ಜನತೆ ತಮ್ಮ ಸಾಮೂಹಿಕ ಸಮಸ್ಯೆಗೆ ಅಂದರೆ ಕಾಲುವೆಯ ನೀರು ಬಿಡಿಸುವುದು ಸೇರಿದಂತೆ ಬಹುತೇಖ ಸಮಸ್ಯೆಗಳ ಬಗ್ಗೆ ಕರೆದಾಗ ಬರುತ್ತಾನೆ ಎಂಬ ಒಂದೇ ಕಾರಣಕ್ಕೆ, ಜೊತೆಗೆ ಕಾಂಗ್ರೆಸ್ ಗಾಳಿಯಿಂದ ಗಣೇಶ್ ಭರ್ಜರಿ ಲೀಡ್ ನಿಂದ ಆಯ್ಕೆಯಾಗಿದ್ದಾರೆ ಎನ್ನಬಹುದು. ಆತನನ್ನು ಸೋಲಿಸಲು ಒಳ ಸಂಚು ಮಾಡಿದವರಿಗೂ ಮುಖ ಭಂಗವಾಗಿದೆನ್ನಬಹದು.