ಥೈಲ್ಯಾಂಡ್ ತಲುಪಿದ ಕನ್ನಡ ಸೈಕ್ಲಿಸ್ಟ್ ಪಾಯಲ್; ನಾರಾ ಭರತ್ ರೆಡ್ಡಿ ಹರ್ಷ

Share and Enjoy !

Shares

ಬಳ್ಳಾರಿ:ವಿಜಯಪುರ  ಜಿಲ್ಲೆಯ ಸೈಕ್ಲಿಸ್ಟ್ ಪಾಯಲ್ ಖುಷಿಲಾಲ್ ಚವ್ಹಾಣ್ ಅವರು ಮುಂದಿನ ತಿಂಗಳು ಜೂನ್ 7 ರಿಂದ 13 ರವರೆಗೆ ಥೈಲ್ಯಾಂಡ್ ದೇಶದಲ್ಲಿ ನಡೆಯುವ ಏಶಿಯನ್ ರೋಡ್ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆಂದು ಭಾರತ ಸೈಕ್ಲಿಂಗ್ ಫೌಂಡೇಶನ್ ಅವರು ತಿಳಿಸಿದೆ.ಇದೇ ತಿಂಗಳ ಕೊನೆಯ ವಾರದಲ್ಲಿ ಭಾರತದಿಂದ ಅವರ ತಂಡ ಥೈಲ್ಯಾಂಡ್‍ಗೆ ಪ್ರಯಾಣ ಬೆಳೆಸಿಲಿದ್ದಾರೆ.

ನಾರಾ ಭರತ್ ರೆಡ್ಡಿ ಅವರ ಬೆಂಬಲ ನೆನೆದ ಪಾಯಲ್:

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಸೈಕ್ಲಿಸ್ಟ್ ಪಾಯಲ್ ಚವ್ಹಾಣ್ ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ನೆನೆದಿದ್ದಾರೆ. ಎರಡು ವರ್ಷಗಳ ಹಿಂದೆ ತಾವು ಸೈಕ್ಲಿಂಗ್ ಪ್ರಾಕ್ಟಿಸ್ಟ್ ಮಾಡಲು ದುಬಾರಿ ವೆಚ್ಚದ ಅತ್ಯಾಧುನಿಕ ಸೈಕಲ್‍ನ ಅಗತ್ಯ ಇದ್ದು, ಅಂತಹ ಕ್ರೀಡಾ ಸೈಕಲ್ ಅನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮವೊಂದು ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡಿದಾಗ, ನಾರಾ ಭರತ್ ರೆಡ್ಡಿ ಅವರು ತಮ್ಮ ನೇತೃತ್ವದ ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ ತಮಗೆ ಅಂದಾಜು 8 ಲಕ್ಷ ರೂ. ಮೌಲ್ಯದ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದರು. ತದನಂತರ ಈ ಸೈಕಲ್ ಮೂಲಕ ಪ್ರಾಕ್ಟೀಸ್ ಮಾಡಿ ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಗಳಲ್ಲಿ ಭಾಗಿಯಾಗಲು ಸಾಧ್ಯವಾಯಿತು. ಈಗ ಥೈಲ್ಯಾಂಡ್ ದೇಶಕ್ಕೆ ನಾನು ಸ್ಪರ್ಧೆಯಲ್ಲಿ ಭಾಗಿಯಾಗುವುದರ ಹಿಂದೆ ನಾರಾ ಭರತ್ ರೆಡ್ಡಿ ಅವರು ಅಂದು ಅತ್ಯಾಧುನಿಕ ಸ್ಪೋಟ್ರ್ಸ್ ಸೈಕಲ್ ಅನ್ನು ಕೊಡಿಸಿದ್ದೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನ ಈ ಸಾಧನೆಗೆ ನಾರಾ ಭರತ್ ರೆಡ್ಡಿ ಅವರ ಸಹಾಯವೇ ಕಾರಣ ಎಂದಿದ್ದಾರೆ.

Share and Enjoy !

Shares