ಮರಳಿ ಪ್ರಥಮ ರ್‍ಯಾಂಕ್ ಮುಡಿಗೇರಿಸಿಕೊಂಡ ಇಂದು ಕಾಲೇಜು

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ಕೊಟ್ಟೂರು : ಈ ಬಾರಿಯ ಪಿಯ ಪರೀಕ್ಷೆಯ  ಫಲಿತಾಂಶದಲ್ಲಿ ಪಟ್ಟಣದ ಇಂದು ಇನ್ನೋವೇಟಿವ್ ಕಾಲೇಜಿನ ವಿದ್ಯಾರ್ಥಿ ಕುಶ ನಾಯಕ್ ಮರು ಮೌಲ್ಯಮಾಪನದಲ್ಲಿ ಪುನಃ ರಾಜ್ಯಕ್ಕೆ ಮೊದಲ  ರ‌್ಯಾಂಕ್ ಪಡೆದುಕೊಂಡಿರುತ್ತಾನೆ. ಕಳೆದ ತಿಂಗಳು ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ಕಲಾವಿಭಾಗದಲ್ಲಿ  592 ಅಂಕಗಳನ್ನು ಗಳಿಸಿ ಎರಡನೇ ರ್‍ಯಾಂಕ್ ಗಳಿಸಿದ್ದು ಅನುಮಾನಗೊಂಡು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಎರಡು ಅಂಕಗಳ ಹೆಚ್ಚಿನ ಗಳಿಕೆಯಿಂದ ಒಟ್ಟು 594 ಅಂಕ ಗಳಿಸಿ ಕಲಾವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾನೆ.

ಮತ್ತೊರ್ವ ಇಂದು ಪಿಯು ಕಾಲೇಜಿನ  ವಿದ್ಯಾರ್ಥಿ ಕೃಷ್ಣ ಕೆ. ಕಳೆದ ಸಾಲಿನಲ್ಲಿ 591 ಅಂಕಗಳನ್ನು ಗಳಿಸಿದ್ದು, ಮರು ಮೌಲ್ಯಮಾಪನದಲ್ಲಿ ಎರಡು ಅಂಕಗಳ ಹೆಚ್ಚುವರಿ ಅಂಕಗಳಿಂದ ಒಟ್ಟಾರೆ 593 ಅಂಕಗಳನ್ನು ಪಡೆದು   ರಾಜ್ಯಕ್ಕೆ ಎರಡನೇ ಟಾಪರ್ ಆಗಿದ್ದಾನೆ. ವಿದ್ಯಾರ್ಥಿನಿ ಡಿ ಕರಿಬಸಮ್ಮ ಮೂರನೇ ರ‍್ಯಾಂಕ್ ಶ್ರೇಣಿಯಲ್ಲಿದ್ದು ಕ್ರಮವಾಗಿ ಮೂರು ರ‍್ಯಾಂಕುಗಳನ್ನು ಇಂದು ಕಾಲೇಜು ಮರಳಿ ಬುಟ್ಟಿಗೆ ಹಾಕಿ ಕೊಂಡಿರುವುದಲ್ಲದೆ  ಸತತ ಎಂಟನೇ ವರ್ಷದಲ್ಲೂ ರ್‍ಯಾಂಕ್ ಗಳಿಕೆಯಲ್ಲಿ  ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಕುಶ ನಾಯಕ್ ವಿಜಯನಗರ ವಾಣಿ ಪತ್ರಿಕೆಯೊಂದಿಗೆ ಮಾತನಾಡಿ ಕಡಿಮೆ ಬಂದ ಅಂಕಗಳ ಯೋಚನೆ ಮಾಡದೆ ಆತ್ಮವಿಶ್ವಾಸದಿಂದ ನನ್ನ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದರು. ಹಾಗೂ ಕಾಲೇಜಿನ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಪ್ರೋತ್ಸಾಹವನ್ನು ಎಂದಿಗೂ ಮರೆಯಲಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಎಚ್ಎನ್ ವೀರಭದ್ರಪ್ಪ ಮತ್ತು ಕಾಲೇಜಿನ ವೃಂದ  ಸಿಹಿ ಹಂಚಿ ಕುಣಿದು ಸಂಭ್ರಮಿಸಿದರುವಿಜಯನಗರ ವಾಣಿ ಸುದ್ದಿ
ಕೊಟ್ಟೂರು : ಈ ಬಾರಿಯ ಪಿಯ ಪರೀಕ್ಷೆಯ ಫಲಿತಾಂಶದಲ್ಲಿ ಪಟ್ಟಣದ ಇಂದು ಇನ್ನೋವೇಟಿವ್ ಕಾಲೇಜಿನ ವಿದ್ಯಾರ್ಥಿ ಕುಶ ನಾಯಕ್ ಮರು ಮೌಲ್ಯಮಾಪನದಲ್ಲಿ ಪುನಃ ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದುಕೊಂಡಿರುತ್ತಾನೆ. ಕಳೆದ ತಿಂಗಳು ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ಕಲಾವಿಭಾಗದಲ್ಲಿ 592 ಅಂಕಗಳನ್ನು ಗಳಿಸಿ ಎರಡನೇ ರ್‍ಯಾಂಕ್ ಗಳಿಸಿದ್ದು ಅನುಮಾನಗೊಂಡು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಎರಡು ಅಂಕಗಳ ಹೆಚ್ಚಿನ ಗಳಿಕೆಯಿಂದ ಒಟ್ಟು 594 ಅಂಕ ಗಳಿಸಿ ಕಲಾವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾನೆ.
ಮತ್ತೊರ್ವ ಇಂದು ಪಿಯು ಕಾಲೇಜಿನ ವಿದ್ಯಾರ್ಥಿ ಕೃಷ್ಣ ಕೆ. ಕಳೆದ ಸಾಲಿನಲ್ಲಿ 591 ಅಂಕಗಳನ್ನು ಗಳಿಸಿದ್ದು, ಮರು ಮೌಲ್ಯಮಾಪನದಲ್ಲಿ ಎರಡು ಅಂಕಗಳ ಹೆಚ್ಚುವರಿ ಅಂಕಗಳಿಂದ ಒಟ್ಟಾರೆ 593 ಅಂಕಗಳನ್ನು ಪಡೆದು ರಾಜ್ಯಕ್ಕೆ ಎರಡನೇ ಟಾಪರ್ ಆಗಿದ್ದಾನೆ. ವಿದ್ಯಾರ್ಥಿನಿ ಡಿ ಕರಿಬಸಮ್ಮ ಮೂರನೇ ರ‍್ಯಾಂಕ್  ಕ್ರಮವಾಗಿ ಮೂರು ರ‍್ಯಾಂಕುಗಳನ್ನು ಇಂದು ಕಾಲೇಜು ಮರಳಿ ಬುಟ್ಟಿಗೆ ಹಾಕಿ ಕೊಂಡಿರುವುದಲ್ಲದೆ ಸತತ ಎಂಟನೇ ವರ್ಷದಲ್ಲೂ ರ್‍ಯಾಂಕ್ ಗಳಿಕೆಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಕುಶ ನಾಯಕ್ ವಿಜಯನಗರ ವಾಣಿ ಪತ್ರಿಕೆಯೊಂದಿಗೆ ಮಾತನಾಡಿ ಕಡಿಮೆ ಬಂದ ಅಂಕಗಳ ಯೋಚನೆ ಮಾಡದೆ ಆತ್ಮವಿಶ್ವಾಸದಿಂದ ನನ್ನ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದರು. ಹಾಗೂ ಕಾಲೇಜಿನ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಪ್ರೋತ್ಸಾಹವನ್ನು ಎಂದಿಗೂ ಮರೆಯಲಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಎಚ್ಎನ್ ವೀರಭದ್ರಪ್ಪ ಮತ್ತು ಕಾಲೇಜಿನ ವೃಂದ ಸಿಹಿ ಹಂಚಿ  ಸಂಭ್ರಮಿಸಿದರು

Share and Enjoy !

Shares