ಲೇಔಟ್ ನಲ್ಲಿ ನೀರಿನ 3 ಮೋಟರ್ ಗಳ ಕಳ್ಳತನ.

Share and Enjoy !

Shares
Listen to this article

ಬಳ್ಳಾರಿ :ಗಣಿನಾಡಲ್ಲಿ ರಾತ್ರಿ ಸಮಯದಲ್ಲಿ ಮೋಟರ್ ಕಳ್ಳತನ ಮಾಡುವ ಕಳ್ಳರು.

ಗಣಿನಾಡು ಬಳ್ಳಾರಿ ನಗರದ ಹೊರವಲಯದ ಕಪ್ಪಗಲ್ಲು ರಸ್ತೆಯಲ್ಲಿ ಇರುವ ಕೋಟೇಶ್ ಲೇಔಟ್ ನಲ್ಲಿ ಕಳೆದ ಎರಡು‌ದಿನಗಳ ಹಿಂದೆ ಶಿಕ್ಷಕರ ಮನೆಯೊಂದರಲ್ಲಿನ ಆವರಣದಲ್ಲಿ ರಾತ್ರಿ ಸಮಯದಲ್ಲಿ ಕಳ್ಳರು ಮೂರು ನೀರಿನ ಮೋಟರ್ ಗಳನ್ನು ಕಳ್ಳತನ  ಮಾಡಿದ ದುರ್ಘಟನೆ ನಡೆದಿದೆ.

ಇತ್ತಿಚ್ಚಿಗೆ ನಗರದ ವಿವಿಧ ಲೇಔಟ್ ಗಳಲ್ಲಿ ಹೊಸಮನೆಗಳ ನಿರ್ಮಾಣದ ಸಮಯದಲ್ಲಿ ಹಾಗೂ ಮನೆ ಕಟ್ಟದ ನಂತರದಲ್ಲಿ ರಾತ್ರಿ ಸಮಯದಲ್ಲಿ  ಮನೆಗಳಿಗೆ ನುಗ್ಗಿ ಕೆಲ ಕಳ್ಳರು ನೀರಿನ ಮೋಟರ್ ಗಳನ್ನು ಕಳ್ಳತನ ಮಾಡುತ್ತಿದ್ದಾರೆ.

ಕನಿಷ್ಟ ಒಂದು ಮೋಟರ್ ( ಒಂದು ಹೆಚ್.ಪಿಬೆಲೆ 15 ಸಾವಿರ  ಇದೆ. ಒಟ್ಟು ಮೂರು ಮೋಟರ್ ಗಳು ಕಳ್ಳತನವಾಗಿದೆ. ಒಟ್ಟಾರೆಯಾಗಿ (15*3), 45 ಸಾವಿರ ರೂಪಾಯಿ ಮೌಲ್ಯದ ಮೋಟರ್ ಗಳನ್ನು ಕಳ್ಳತನ ಎನ್ನುವ ಮಾಹಿತಿಯನ್ನು ಮನೆಯ ಮಾಲೀಕರಾದ ಬಸವರಾಜ್ ಅವರು ತಿಳಿಸಿದರು.

ಹಿಂದೆ ಮನೆ ಕಟ್ಟುವ ಸಮಯದಲ್ಲಿ ಒಂದು ಮೋಟರ್ ಕಳ್ಳತನ ಮಾಡಿದ್ದರು. ಒಟ್ಟಾರೆಯಾಗಿ  ನಾಲ್ಕು ಮೋಟರ್ ಗಳನ್ನು ಕಳ್ಳತನ ವಾಗಿದೆ ಎಂದರು. ನಗರದ ತಾಳೂರು ರಸ್ತೆಯಲ್ಲಿನ ಲೇಔಟ್ ಮತ್ತು ರಾಘವೇಂದ್ರ ಚಿತ್ರಮಂದಿರ ಹಿಂದಿನ ಪ್ರದೇಶದಲ್ಲಿ ಮೋಟರ್ ಗಳು ಕಳ್ಳತನವಾಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕು.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲು ಮಾಡಿಲಾಗಿದೆ ಎಂದರು.

Share and Enjoy !

Shares