ಕಂಪ್ಲಿ: ಕಂಪ್ಲಿ ಸಮೀಪದ ಹೊಸ ನೆಲ್ಲುಡಿಯ ಕೇರಿ ಕೆಂಚಮ್ಮ ದೇವಿ ಹಾಗೂ ಮಾರೆಮ್ಮ ದೇವಿ ಜಾತ್ರೆಯ ಅಂಗವಾಗಿ ಗುರುವಾರ ರಾತ್ರಿ ಸಾಮಾಜಿಕ ನಾಟಕದ ಮುಂಚಿನ ತಯಾರಿಗಾಗಿ ಗೆಜ್ಜೆ ಪೂಜೆಯ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ನಾಟಕದ ಮ್ಯಾನೇಜರ್ ಸಣ್ಣ ಹುಲಗಪ್ಪನವರು ಮಾತನಾಡಿ ದಿನಾಂಕ 31-05-2023 ಬುಧವಾರದಂದು ನಮ್ಮ ಊರಿನ ಜಾತ್ರೆಯ ಪ್ರಯುಕ್ತ ಈ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ.
ಇದರ ಪೂರ್ವಭಾವಿಯಾಗಿ ಹಿರಿಯರ ಆಶೀರ್ವಾದದೊಂದಿಗೆ ಈ ಗೆಜ್ಜೆಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಹೊಸ ನೆಲ್ಲುಡಿ ಗ್ರಾಮದ ಮುಖಂಡರು ಹಿರಿಯರು, ಯುವಕರು ಎಲ್ಲಾ ಸಮುದಾಯದ ಜನರು ಹಾಗೂ ಅಕ್ಕ ಪಕ್ಕದ ಊರಿನ ಸಹಸ್ರಾರು ಜನರು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು…