ಪ್ರಾಂಶುಪಾಲರು ಪ್ರೊ.ಶಿವಪ್ಪರವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಒತ್ತಾಯ: ಡಾ.ಟಿ ದುರ್ಗಪ್ಪ.

Share and Enjoy !

Shares
Listen to this article

ಬಳ್ಳಾರಿ: ಪ್ರಾಂಶುಪಾಲರು ಪ್ರೊ.ಶಿವಪ್ಪರವರ ಅತಿಥಿ ಉಪನ್ಯಾಸಕರಿಗೆ ಅಸಭ್ಯ ವರ್ತನೆಯನ್ನು ತೋರಿದ್ದಾರೆ  ಕೂಡಲೇ ಉನ್ನತ ಶಿಕ್ಷಣ ಇಲಾಖೆ, ಆಯುಕ್ತರು ವಿಚಾರ ಮಾಡಿ ಕ್ರಮ ತೆಗೆದುಕೊಳ್ಳಿ ಡಾ.ಟಿ ದುರ್ಗಪ್ಪ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಾಜಿ ಶಾಸಕ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ಕನ್ನಡ ವಿಭಾಗದ ಹಿರಿಯ ಅತಿಥಿ ಉಪನ್ಯಾಸಕ ಡಾ.ಷಣ್ಮುಖಪ್ಪ ಮತ್ತು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಶಿವಪ್ಪ ಅವರ ಸಂಬಳ ವಿಚಾರಕ್ಕೆ ಮಾತಿನ ಚಕಮಕಿ ನಡೆದ ವಿಡಿಯೋ ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಪ್ರಭಾರ ಪ್ರಾಂಶುಪಾಲ ಪ್ರೊ.ಶಿವಪ್ಪ ಅನೇಕ ವರ್ಷಗಳಿಂದ ಕಾಲೇಜಿನಲ್ಲಿ ಬಿ.ಕಾಂ ವಿಭಾಗದಲ್ಲಿ ಪ್ರೊಫೆಸರ್ ಆಗಿ ಇದ್ದುಇವರು ಯಾವುದೇ ಪಾಠಗಳನ್ನು ಮಾಡದೆ ಬರಿ ಕಾಲೇಜಿಗೆ ಬಂದ ಸಹಿ ಮಾಡಿ ಕಾಲಕಳೆಯುವರಾಗಿದ್ದಾರೆ ಎಂದು ಅಲ್ಲಿನ ಸಿಬ್ಬಂದಿಗಳು ತಿಳಿಸಿದ್ದಾರೆ.

ಇನ್ನು ಈತನಿಗೆ ಪ್ರಭಾರ ಪ್ರಾಂಶುಪಾಲರಾದ  ಹುದ್ದೆ ಬಂದ ಕೂಡಲೇ ನಿರಂಕುಶ ಅಧಿಕಾರ ಚಲಾಯಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂತವರಿಗೆ ಪ್ರಾಂಶುಪಾಲರ ಹುದ್ದೆ ಏಕೆ ? ಮೊದಲು ಸಿಟ್ ನಿಂದ ಕೆಳಗೆ ಇಳಿ ಎಂದು ಒತ್ತಾಯ ಮಾಡಿದರು.

 

ಅತಿಥಿ ಉಪನ್ಯಾಸಕರಿಗೆ ಕಿರುಕುಲದ ಆರೋಪ:

ಇನ್ನು ಪ್ರಾಂಶುಪಾಲರ ಮೇಲೆ ಇಲ್ಲಿ ಕರ್ತವ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರ ಮೇಲೆ ಕಿರುಕುಲ ನೀಡಿದ್ದಾರೆ ಎನ್ನುವ ಆರೋಪ ಸಹ ಇದೆ. ಅತಿಥಿ ಉಪನ್ಯಾಸಕ ಸಂಬಳ ಇನ್ನಿತರ ವಿಷಯಗಳಿಗೆ ಬಹಳ ಸಮಸ್ಯೆ ಮಾಡುತ್ತಿದ್ದಾನೆ. ಉದ್ದೇಶ ಪೂರಕವಾಗಿ ಗೈರು ಅಂತ ಹಾಕೋದ್, ಸಂಬಳ ಲೇಟಗಿ ಮಾಡೋದ್, ಅತಿಥಿ ಉಪನ್ಯಾಸಕರಿಗೆ ಅವಚ್ಯ, ಅಸಭ್ಯ ಮಾತುಗಳಿಂದ ಬೈಯುವ, ಹಾಜರಾತಿ  ಪುಸ್ತಕ ಬಚ್ಚಿ ಇಡುವ ಕೆಲಸ ಮಾಡುತ್ತಾರೆಕೆಲ ಅತಿಥಿ ಉಪನ್ಯಾಸಕರನ್ನು

ಪ್ರಾಂಶುಪಾಲರಿಗೆ ಬಕೆಟ್ ಗಳಾಗಿ ಇಟ್ಟುಕೊಂಡಿದ್ದಾರೆ. ಅವರು ಹೇಳಿದಾಗೆ ಕೇಳುತ್ತಾನೆ ಎನ್ನುವ ಆರೋಪ ಇದೆ.

 ಏಕಕಾಲಕ್ಕೆ ಎರಡು ಕಾಲೇಜುಗಳಲ್ಲಿ ಕರ್ತವ್ಯ ಪ್ರಾಂಶುಪಾಲರು ಮತ್ತು ಜಂಟಿ ನಿರ್ದೇಶಕರು ಮೌನ :

ಇನ್ನು ಕಾಲೇಜಿನಲ್ಲಿ ಏಕಕಾಲಕ್ಕೆ ಎರಡು ಕಾಲೇಜುಗಳಲ್ಲಿ ಕೆಲ ವಿಭಾಗದ ಅತಿಥಿ ಉಪನ್ಯಾಸಕ ನಗರದ ವಿಜಯನಗರ ಕಾಲೇಜಿನಲ್ಲಿ ಹಾಗೂ ಕೆಲ ಖಾಸಗಿ ಕಾಲೇಜಿನಲ್ಲಿ ಪೂರ್ಣವಧಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಪೂರ್ಣವಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುವವರ ಬೇರೆ ಕಾಲೇಜುಗಳಲ್ಲಿ ಕರ್ತವ್ಯ ಅವಕಾಶವಿಲ್ಲ ಆದ್ರೂ ಕಾಲೇಜಿನ ಪ್ರಾಂಶುಪಾಲರು ಅವರಿಗೆ ಅನುಮತಿ ನೀಡಿದ್ರಾ ಅಥವ ಜಾತಿ ಮತ್ತು ವಿಭಾಗದ ಆಧಾರದ ಮೇಲೆ ಅನುಕಂಪ ಬಂದಿದೆನಾ ? ಇಂತ ಕಲ್ಬುರ್ಗಿ ಜಂಟಿ ನಿರ್ದೇಶಕರು ಅತಿಥಿ ಉಪನ್ಯಾಸಕರ ವಿರುದ್ಧ ಸೂಕ್ರ ಕ್ರಮ ತೆಗದುಕೊಳಬೇಕು.

 ಸರ್ಕಾರಿ ಶಿಕ್ಷಕಿ ಹುದ್ದೆಗೆ ನೇಮಕವಾಗಿದ್ದ ಉಪನ್ಯಾಸಕಿಗೆ 26 ಸಾವಿರ ಸಂಬಳ ಹಾಕಿದ್ದಾರೆ :

ವಿಜ್ಞಾನ ವಿಭಾಗದ ಒಬ್ಬ ಅತಿಥಿ ಉಪನ್ಯಾಸಕಿ ಸರ್ಕಾರಿ ಶಿಕ್ಷಕಿಯಾಗಿ ಜನವರಿಗೆ  1ನೇ ತಾರೀಖು 2023 ರಂದು ನೇಮಕವಾಗಿ ಶಾಲೆಯ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ ಕಾಲೇಜಿನ ಪ್ರಾಂಶುಪಾಲ ಪ್ರೊ. ನಟರಾಜ್ ಪಾಟೀಲ್,   ಪ್ರೊ.ಶಿವಪ್ಪ, ವಿಭಾಗದ ಮುಖ್ಯಸ್ಥರು, ಟೈಪಿಸ್ಟ್  ಮಂಗಳ, ಸಂಬಳದ ಬಿಲ್ ಮಾಡಿದ ಕೆಲ ಅತಿಥಿ ಉಪನ್ಯಾಸಕರು ಜನವರಿ ತಿಂಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಶಿಕ್ಷಕಿಗೆ ಬ್ಯಾಂಕ್ ಅಕೌಂಟ್ ಗೆ  26 ಸಾವಿರ ರೂಪಾಯಿ ಸಂಬಳ ಹಾಕಿದ್ದಾರೆ. ಇನ್ನು ಶಿಕ್ಷಕಿಗೆ ಪ್ರಾಂಶುಪಾಲರು, ಒಬ್ಬ ಅತಿಥಿ ಉಪನ್ಯಾಸಕ ಪೋನ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಸಂಬಳ ಹಾಕಿಸಿದ್ದೆವೆ 26 ಸಾವಿರ ಹಣ ಬಿಡಿಸಿ ನಮಗೆಕೊಡಿ ಎಂದು ಹೇಳಿದ್ದಾರೆ ಎನ್ನುವ ಪಕ್ಕ ದಾಖಲೆ ಸಮೇತ ಮಾಹಿತಿ ಲಭ್ಯವಾಗಿದೆ.

 ನೇಮಕಗೊಂಡ ಅತಿಥಿ ಉಪನ್ಯಾಸಕರ ದಾಖಲೆ ಪರಿಶೀಲನೆ ಮಾಡಿಲ್ಲ: 2023 ರಲ್ಲಿ ನೇಮಕಗೊಂಡ ಅತಿಥಿ ಉಪನ್ಯಾಸಕ ದಾಖಲಾತಿಗಳನ್ನು ಪರಿಶೀಲನೆ ಮಾಡದೆ ಅತಿಥಿ ಉಪನ್ಯಾಸಕ ನೇಮಕಕ್ಕೆ ಮಾಡಿಕೊಂಡಿದ್ದು ಅನುಮಾನ ಇದೆ ಎನ್ನುವ ಅಂಶಗಳು ಬಗ್ಗೆ ಸಹ ಮಾಹಿತಿ ಲಭ್ಯವಾಗಿದೆ. ಇದರ ಬಗ್ಗೆ ಕೆಲವರು ಆರ್.ಟಿ. ಹಾಕಿ ಮಾಹಿತಿ ಪಡೆಯಲು ಸಹ ಮುಂದಾಗಿದ್ದಾರೆ.

ಇನ್ನು ಕಾಲೇಜಿನಲ್ಲಿ ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಅಂಕ ಪಡೆದುಕೊಂಡು ಪ್ರವೇಶ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯ ಇದೆ. ನಕಲಿ ಮತ್ತು ಕೃತಿಚೌಯ್ಯ  ಪಿ.ಎಚ್.ಡಿ, ಕೆಸೆಟ್, ನೆಟ್ ಪ್ರಮಾಣಪತ್ರಗಳನ್ನು ನೀಡಿದ್ದಾರೆ ಎನ್ನುವ ಆರೋಪ‌ ಇದೆ.

ಎಲ್ಲಾ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಇಂತವರ ವಿರುದ್ಧ ಕಲ್ಬುರ್ಗಿ ಜಂಟಿ ನಿರ್ದೇಶಕರು, ಉನ್ನತ ಶಿಕ್ಷಣ ಇಲಾಖೆ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಸೂಕ್ತ ಕಾನೂನಿನ ಕ್ರಮತೆಗೆದುಕೊಳ್ಳಬೇಕಿದೆ.

 ಬಯೋಮೆಟ್ರಿಲ್ ಇಲ್ಲ: ಖಾಯಂ ನೌಕರರರು ಆರಾಮ.

ಈ‌ ಕಾಲೇಜಿನಲ್ಲಿ ಬಯೋಮೆಟ್ರಿಲ್ ಇಲ್ಲದೆ ಇರುವುದು ಕೆಲ ಖಾಯಂ ಪ್ರಾಧ್ಯಾಪಕರಿಗೆ, ಸಹಾಯಕ ಪ್ರಾಧ್ಯಾಪಕರಿಗೆ ಹಾಗೂ ಕೆಲ ಭೋದಕೇತರ ಖಾಯಂ ಸಿಬ್ಬಂದಿಗಳು ತಮಗೆ ಇಷ್ಟ ಬಂದಾಗ ಕಾಲೇಜಿಗೆ ಬರೋದ್, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ  ಮನೆಗಳಿಗೆ, ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಾರೆ ಎನ್ನುವ ಬಹುದೊಡ್ಡ ಆರೋಪ ಇದೆ. ಲಕ್ಷಗಟ್ಟಲೆ ಸಂಬಳ ಪಡೆದು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಇದೆ.

 ಅತಿಥಿ ಉಪನ್ಯಾಸಕರು ಕಳೆದ ಮೂರು ವರ್ಷಗಳಿಂದ ಪದವಿ ಪರೀಕ್ಷೆ ಕರ್ತವ್ಯ ನಿರ್ವಹಿಸಿದ ಹಣವನ್ನು ಕಾಲೇಜಿನ ಮೂವರು ಪ್ರಾಂಶುಪಾಲರಾದ ಡಾ.ಕನಕೇಶಮೂರ್ತಿ, ಪ್ರೊ.ನಟರಾಜ್ ಪಾಟೀಲ್ ಹಾಗೂ ಪ್ರೊ.ಶಿವಪ್ಪ ಇದುವರೆಗೂ ಲಕ್ಷಗಟ್ಟಲೆ ಹಣವನ್ನು ನೀಡಿಲ್ಲದೆ ಇರುವುದು ಸಹ ದುರಂತ. ಇನ್ನು ವಿಚಾರವಾಗಿ ಕೇಳಿದ್ರೇ ವಿಶ್ವವಿದ್ಯಾಲಯ ಪರೀಕ್ಷಾದವರು ನೀಡಿಲ್ಲ, ಬಿಲ್ ಕಳಿಸಿದೆ ಎನ್ನುವ ಕುಂಟ ನೆಪ ಹೇಳುತ್ತಿದ್ದಾರೆ ಎಂದು ನೊಂದ ಅತಿಥಿ ಉಪನ್ಯಾಸಕರು ತಿಳಿಸಿದರು.

 ಇನ್ನು ವಿಚಾರಕ್ಕೆ ಪ್ರೊ.ಶಿವಪ್ಪ ಮತ್ತು  ಷಣ್ಮುಖಪ್ಪ ಅವರಿಗೆ ದೂರವಾಣಿ ಮೂಲಕ ಕರೆಮಾಡಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.

 ಒಟ್ಟಾರೆಯಾಗಿ ಕಲ್ಬುರ್ಗಿ  ನಿರ್ದೇಶಕರು ಹಾಗೂ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಅವರು ಪ್ರಭಾರ ಪ್ರಾಂಶುಪಾಲ ಪ್ರೊ.ಶಿವಪ್ಪ ನನ್ನು ಕೆಳಗಿ ಇಳಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಅತಿಥಿ ಉಪನ್ಯಾಸಕರು ತಿಳಿಸಿದರು.

 ಹೇಳಿಕೆ:

ರಾಜ್ಯದಲ್ಲಿ ಇರುವ ಅತಿಥಿ ಉಪನ್ಯಾಸಕರಿಗೆ ತೊಂದರೆ ಆಗಬಾರದು. ಪ್ರಾಂಶುಪಾಲ ಪ್ರೊ.ಶಿವಪ್ಪ ಅವರು ನಿರಂಕುಶ ದೋರಣ ತೋರಿ, ಅಸಭ್ಯವರ್ತನೆ ಮಾಡಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವರ ವಿರುದ್ಧ ಉನ್ನತ ಶಿಕ್ಷಣ ಇಲಾಕೆ ಆಯುಕ್ತರು, ನಿರ್ದೇಶಕರು, ಕಲಬುರ್ಗಿ ಜಂಟಿ ನಿರ್ದೇಶಕರು ವಿಚಾರ ಮಾಡಿ ಕ್ರಮ ತೆಗೆದುಕೊಳ್ಳಬೇಕು ಡಾ.ಟಿ ದುರ್ಗಪ್ಪ

ರಾಜ್ಯ ಗೌರವ ಅಧ್ಯಕ್ಷರು ಮತ್ತು ಬಳ್ಳಾರಿ ಜಿಲ್ಲಾ ಅಧ್ಯಕ್ಷ, ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು ಸಂಘಟನೆಯವರು ತಿಳಿಸಿದ್ದಾರೆ

.

Share and Enjoy !

Shares