ಲಸಿಕಾಕರಣ ಜಾಗೃತಿ ಅಂಗವಾಗಿ ಯುನಿಸೆಫ್ ರಾಷ್ಟೀಯ ತಂಡದ ಭೇಟಿ

Share and Enjoy !

Shares
Listen to this article

ಬಳ್ಳಾರಿ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ನಿಮಿತ್ತವಾಗಿ ಸಮುದಾಯದ ಸಹಭಾಗಿತ್ವಕ್ಕಾಗಿ ವಿಶೇಷ ಎನಿಸುವ ರೀತಿಯಲ್ಲಿ ಸಿದ್ಧಪಡಿಸಿ 2018ರಲ್ಲಿ ಅಂತರ್ ವ್ಯಕ್ತಿ ಸಂವಹನ ಕೌಶಲ್ಯ ಕುರಿತು ಬ್ರಿಡ್ಜ್ (BRIDGE) ತರಬೇತಿಯನ್ನು ಜಿಲ್ಲೆಯಲ್ಲಿ ನೀಡಿದರಿಂದಾಗಿ  ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಮಕ್ಕಳ ಲಸಿಕಾರಕರಣಕ್ಕೆ ಸಮಯದಾಯದ ಸಹಭಾಗಿತ್ವ ಕುರಿತು ಮೌಲ್ಯಮಾಪನ  ಕೈಗೊಳ್ಳಲು ಭೇಟಿ ನೀಡಿದ ತಂಡವು ಜನತೆಯ ಅಭಿಪ್ರಾಯಗಳನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದೆ.

ಯುನಿಸೆಫ್ ತಂಡದ ಸದಸ್ಯರಾದ ಶ್ರೀಮತಿ ಸುಧಾ ನಾಯರ್, ಶ್ರೀಮತಿ ಅಂಜಲಿ ಅಯ್ಯರ್‌, ನೇತೃತ್ವದಲ್ಲಿ ಕೇಂದ್ರದ ಯುನಿಸೆಫ್ ತಂಡವು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ  ಡಾ.ಎಚ್‌.ಎಲ್‌.ಜನಾರ್ಧನ ರವರನ್ನು ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುನಿಸೆಫ್ ನ ಆರೋಗ್ಯ ಜಾಗೃತಿ ವಿಭಾಗದ  ರಾಜ್ಯ ಸಲಹೆಗಾರರು ಮನೋಜ್‌ ಸ್ಟೇಬಾಸಿನ್‌, ಶ್ರೀಕರ್‌ ತಂಡದೊಂದಿಗೆ ಇದ್ದರು.

ನಂತರ ತಂಡವು ಆರ್‌ಸಿಎಚ್‌ ಅಧಿಕಾರಿಗಳಾದ ಡಾ.ಆರ್‌.ಅನೀಲ್ ಕುಮಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಕ್ಷೇತ್ರ ಆರೋಗ್ಯ ಶಿಕ್ಷಾಧಿಕಾರಿ ಶಾಂತಮ್ಮ ರವರಿಂದ ಮಾಹಿತಿ ಪಡೆದು ಪುನಃ ತಂಡವು ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ದಮ್ಮುರ ಗ್ರಾಮಕ್ಕೆ ಭೇಟಿ ನೀಡಿ  ಡಾ.ತರುಣ್‌, ಡಾ,ರೇಷ್ಮಾ, ಪ್ರಾಥಮಿಕ ಸುರಕ್ಷಾಧಿಕಾರಿ ಶಮಷಾದ್‌ ಬೇಗಂ, ಚಂದ್ರಿಕಾ, ಜಯಶ್ರೀ ಆಶಾ ಕಾರ್ಯಕರ್ತೆ ಪರಿಮಳ, ಪ್ರತೀಕ್ಷ  ಹಾಗೂ ತಾಯಂದಿರು, ಮುಖಂಡರ ಮೂಲಕ ಕಾರ್ಯವಿಧಾನದ ಕುರಿತು ಪ್ರತ್ಯೇಕವಾಗಿ ಸಂದರ್ಶನ ಮಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಆರೋಗ್ಯ ನೀರಿಕ್ಷಣಾಧಿಕಾರಿ ಶರಣಬಸವ, ಸಮುದಾಯ ಆರೋಗ್ಯ ಅಧಿಕಾರಿ ಭರತ, ಔಷಧಿ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.

 

Share and Enjoy !

Shares