ಹನುಮಂತಪ್ಪ.ಜಿಯವರು ಪಿ.ಎಸ್.ಐ. ಹುದ್ದೆಯಿಂದ ನಿವೃತ್ತಿ

Share and Enjoy !

Shares
Listen to this article

ಬಳ್ಳಾರಿ:34 ವರ್ಷಗಳು ಪೊಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಬುಧವಾರ ನಿವೃತ್ತಿ ಹಾಗೂ 27 ವರ್ಷಗಳು ಕಾಲ ಸಿಪಿಐ, ಡಿವೈಎಸ್ಪಿ ಕಚೇರಿಯಲ್ಲಿ ರೈಟರ್, ಠಾಣಾ  ಬರಹಗಾರರಾಗಿ ಸೇವೆ ಸಲ್ಲಿಸಿದ ರೈತನ ಮಗ.

ಪೊಲೀಸ್ ಪೇದೆ, ಹೆಡ್ ಕಾನ್ ಸ್ಟೇಬಲ್, ಎ.ಎಸ್.ಐ ಹಾಗೂ ಪಿ.ಎಸ್.ಐ ಕರ್ತವ್ಯ ನಿರ್ವಹಿಸಿ ನಡೆದು ಬಂದ ದಾರಿ : 1989 ಏಪ್ರಿಲ್‌ 8 ರಂದು ಬಳ್ಳಾರಿ ಜಿಲ್ಲೆಯ ಸಿವಿಲ್ ಪೊಲೀಸ್ ಪೇದೆಯಾಗಿ ನೇಮಕಗೊಂಡು. 1990 ರಲ್ಲಿ ಕಾರವಾರ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೊಡು ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು, 1991-1993ರಲ್ಲಿ ಸಿರಿಗೇರಿ ಠಾಣೆ, 1994-1998 ರಲ್ಲಿ ಸಿಪಿಐ ಕಚೇರಿ ಕೌಲ ಬಜಾರ್,  2003-2010 ಕಮಲಾಪುರ ಠಾಣೆಯ – ಕಂಪ್ಲಿ ಸಿಪಿಐ ಕಚೇರಿ, 2008 ರಲ್ಲಿ ಹೆಡ್ ಕಾನ ಟೇಬಲ್ ಬಡ್ತಿ, 2011-2014ರಲ್ಲಿ ಬ್ರೂಸಪೇಟೆ ಠಾಣೆ -2015 – 2018 ರಲ್ಲಿ ಬಳ್ಳಾರಿ ನಗರ ಡಿವೈಎಸ್ಪಿ ಕಚೇರಿ ರೈಟರ್ ಆಗಿ, 2018 ರಲ್ಲೊ ಎ.ಎಸ್.ಐ , 2019 – 2023 ರಲ್ಲಿ ಬ್ರೂಸಪೇಟೆ ಠಾಣೆಯಲ್ಲಿ ಎ.ಎಸ್.ಐ ಹಾಗೂ ಎರಡು ತಿಂಗಳ ಕಾಲ ಬಳ್ಳಾರಿ ಟ್ರಾಫಿಕ್ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿ, ಮಾರ್ಚ್ 2023 ಮೇ 31 ರಂದು ಬುಧವಾರದೊಂದು ನಿವೃತ್ತಿ ಹೊಂದಿದರು.

ಜೀವನ ಮತ್ತು ವಿದ್ಯಾಭ್ಯಾಸ :

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ನಂ.1 ಇಟಿಗಿ ಗ್ರಾಮದ ದಿವಂಗತ ನಿಂಗಪ್ಪ ಮತ್ತು ಗೌಡ್ರ ಹಂಪಮ್ಮ ಅವರ ದಂಪತಿಯ ಮಗನಾಗಿ ಹನುಮಂತಪ್ಪ.ಜಿ ಜನಿಸಿದರು.

ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ನಂ.1 ಇಟಿಗಿ ಗ್ರಾಮದಲ್ಲಿ,

ಪ್ರೌಢಶಾಲಾ ವಿದ್ಯಾಭ್ಯಾಸ ಎಮ್ಮಿಗನೂರು ಶಾಲೆಯಲ್ಲಿ ಪೂರ್ಣಗೊಳಿಸಿ, ನಂತರ 1981-1985 ರಲ್ಲಿ ಪಿಯುಸಿ ಮತ್ತು ಬಿ.ಕಾಂ ಪದವಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಜಯನಗರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿತ್ತಾ ಜೊತೆಗೆ ತನ್ನ ತಂದೆ ತಾಯಿಯೊಂದಿಗೆ ರೈತಕಿ ಕೆಲಸ ಮಾಡುತ್ತಿದ್ದರು. ನಂತರ ನಾಲ್ಕು ವರ್ಷಗಳ ಕಾಲ ಊರಿನಲ್ಲಿ ಗದ್ದೆಗಳಲ್ಲಿ ಕೆಲಸ ಮಾಡಿದ್ದಾರೆ.

1990 ರಿಂದ 2007 ರವೆಗೆ ಪೊಲೀಸ್ ಪೇದೆಯಾಗಿ 18 ವರ್ಷ ಸೇವೆ, 2008 ರಿಂದ 2017 ರವೆಗೆ ಹೆಡ್ ಕಾನ್ ಟೇಬಲ್ ಆಗಿ 10 ವರ್ಷ ಸೇವೆ, 2018 ರಿಂದ 2023ವರೆಗೆ ಎ.ಎಸ್.ಐ ಆಗಿ 6 ವರ್ಷ ಸೇವೆ, 2 ತಿಂಗಳು ಪಿ.ಎಸ್.ಐ ಆಗಿ ಒಟ್ಟು 34 ವರ್ಷಗಳ ಕಾಲ ಪೊಲೀಸ ಇಲಾಖೆಯಲ್ಲಿ ರೈತನ ಮಗನಾಗಿ ಸೇವೆಯನ್ನು ಸಲ್ಲಿಸಿದ್ದೆನೆ.

ಬಾಕ್ಸ್ :

ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದೆನೆ. ಇಲಾಖೆಯಲ್ಲಿ ಪ್ರಕರಣಗಳ ಪತ್ತೆ, ವಿಐಪಿ ಪಿಎಂ – ಸಿಎಂ ಬಂದೋಬಸ್ತ್ , ನಿಯೋಜನೆ, ಕಚೇರಿ, ಕಡತಗಳು, ರಿಜಿಸ್ಟರ್ ನಿರ್ವಹಣೆ ಕೆಲಸ ಮಾಡಿದ ಅನುಭವ ಇದೆ. 34 ವರ್ಷ ಸೇವೆ ಸಲ್ಲಿಸುವಾಗ ಮಾರ್ಗದರ್ಶನ ನೀಡಿದ ಗುರುಗಳಿಗೆ,  ಸಮಾಜಕ್ಕೆ  ಹಿರಿಯ ಅಧಿಕಾರಿಗಳಿಗೆ, ತಂದೆ ತಾಯಿ, ಪತ್ನಿ, ಮಕ್ಕಳಿಗೆ,‌ಕುಟುಂಬದ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುವೆ.

ಆರೋಗ್ಯ ಮುಖ್ಯ, ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಮಾಡಿ ಎಂದರು.

1990 ರಲ್ಲಿ ಬಳ್ಳಾರಿ ನಗರದ ಕೆ.ವನರಾಜ್ ಹಾಗೂ ಸುಭದ್ರಮ್ಮ ಅವರ ಏಕೈಕ ಸುಪುತ್ರಿ ನಾಗರಾತ್ನ.ಜಿ ಅವರೊಂದಿಗೆ ಮದುವೆ ಆದರು. ಇವರಿಗೆ ಇಬ್ಬರು ಗಂಡು, ಒಬ್ಬ ಹೆಣ್ಣು‌ಮಗಳು ಇದ್ದಾರೆ. ಪೊಲೀಸ ಇಲಾಖೆಯಿಂದ ಸೇವೆ ಸಲ್ಲಿಸಿದರಿಂದ ನಾನು ಮಕ್ಕಳಿಗೆ ಊಟ, ವಸತಿ, ವಿದ್ಯಾಭ್ಯಾಸ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಿದ್ದೆನೆ.

ಮೊದಲನೇ ಮಗ ಗಿರೀಶ್ ಕುಮಾರ್.ಜಿ ಅವರು  ಎಂ.ಎಸ್ ಕಮ್ಯುನಿಕೇಶನ್ (ಪಿ.ಎಚ್.ಡಿ) ವಿದ್ಯಾಭ್ಯಾಸ ಮಾಡಿ ಇಂದು ಸರಳದೇವಿ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ, ಆಕಾಶವಾಣಿ ಉದ್ಘೋಷಕರಾಗಿ, ಪತ್ರಿಕೆಗಳಲ್ಲಿ ಹವ್ಯಾಸಿ ಬರಹಗಾರ ಕೆಲಸ ಮಾಡುತ್ತಿದ್ದಾರೆ.

ಎರಡನೇ ಮಗ ಹರೀಶ್ ಕುಮಾರ್.ಜಿ ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಸಾಪ್ಟ್ ವೇರ್ ಉದ್ಯೋಗಿಯಾಗಿದ್ದಾರೆ.

ಮೂರನೇ ಅವರು ಮಗಳು ಅಂಕಿತ ರಾಜಶೇಖರ್ ಬಿ.ಕಾಂ ಅಭ್ಯಾಸ ಮಾಡಿದ್ದಾರೆ. ಮದುವೆ ಮಾಡಿಕೊಟ್ಟಿದೆ. ಖಾಸಗಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದಾರೆ. ಗಂಡ ರಾಜಶೇಖರ್  ಜಿಂದಾಲ್ ನಲ್ಲಿ ಉದ್ಯೋಗಿ ಆಗಿ ಸೇವೆ, ಇವರಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳು ಇದ್ದಾರೆ.

ಪೊಲೀಸ್ ಇಲಾಖೆಗೆ ಸೇರಿದಾಗ ನನಗೆ ಬಹಳ ಸಂತೋಷವಾಗಿತ್ತು. ಆದ್ರೇ ಇಂದು ನಿವೃತ್ತಿ ಆಗುತ್ತಿರುವುದು ಬೇಸರ ಇದೆ. ಆದ್ರೂ ಅದು ಅನಿವಾರ್ಯವಾಗಿದೆ.

 

 

 

Share and Enjoy !

Shares