ಬಳ್ಳಾರಿ:ನಗರದ ಟ್ರಾಫಿಕ್ ಪೊಲೀಸ್ ಠಾಣೆಯ ಆವರಣದಲ್ಲಿ ಪಿ.ಎಸ್.ಐ ಆಗಿ 2023 ಮೇ 31 ರಂದು ನಿವೃತ್ತಿ ಹೊಂದಿದ ಗೌಡ್ರ ಹನುಮಂತಪ್ಪ ಅವರಿಗೆ ಬೀಳ್ಕೊಡಿಗೆ ಸಮಾರಂಭ ನಡೆಯಿತು.
ಡಿವೈಎಸ್ಪಿ ಬಸವರಾಜ್ ಮಾತನಾಡಿದ ಅವರು ಅರ್ಹತೆಗಿಂತ ಅನುಭವ ಬಹಳ ಮುಖ್ಯ ಎಂದು ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ತಿಳಿಹೇಳಿದರು. ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪಿ.ಎಸ್.ಐ ಹನುಮಂತಪ್ಪ.ಜಿ ಅವರಿಗೆ ಆರೋಗ್ಯ ಭಗವಂತ ನೀಡಿಲಿ ಎಂದು ಶುಭಕೋರಿದರು.
ಪೋಲಿಸ್ ಪವರ್ ಬೇರೆ ಯಾರಿಗೂ ಬರೋಲ್ಲ.ಅದರಲ್ಲಿ ಸಿಎಂ ಪಿಎಂ ಬಂದೋಬಸ್ತ್ ನಿರ್ವಹಣೆ, ಚೆನ್ನಾಗಿ ಕೆಲಸ ಮಾಡಬೇಕು. 34 ವರ್ಷದಲ್ಲಿ ಯಾವುದೇ ಕಪ್ಪು ಚುಕ್ಕೆ ಬರದ ಹಾಗೇ ಕೆಲಸ ಮಾಡಿದ್ದೆನೆ. ಡಿವೈಎಸ್ಪಿ, ಸಿಪಿಐ ಕಚೇರಿಯಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದೆನೆ. ಹಣದಿಂದೇ ಜೀವನ ಮಾಡಲು ಸಾಧ್ಯವಿಲ್ಲ,
ಬದಲಿಗೆ ಆರೋಗ್ಯ ಬಹಳ ಮುಖ್ಯ ಯೋಗ, ಧ್ಯಾನ, ವಾಕಿಂಗ್, ಸೈಕ್ಲಿಂಗ್ ನಂತರ ಚಟುವಟಿಕೆಗಳನ್ನು ಮಾಡಿ ಎಂದರು.
ನಿವೃತ್ತಿ ಹೊಂದಿದ ಗೌಡ್ರ ಹನುಮಂತಪ್ಪ ಅವರಿಗೆ ಬಳ್ಳಾರಿ ನಗರ ಡಿವೈಎಸ್ಪಿ ಬಸವರಾಜ್ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿಗಳು, ಊರಿನ ಗ್ರಾಮಸ್ಥರು, ಕುಟುಂಬಸ್ಥರು ಹೂವಿನ ಹಾರ, ಶಾಲು ಹಾಕಿ ಸನ್ಮಾನ ಮಾಡಿ ಗೌರವಿಸಿದರು.
ನಿರೂಪಣೆ, ಸ್ವಾಗತ, ವಂದನಾರ್ಪಣೆಯನ್ನು ಟ್ರಾಫಿಕ್ ಪೊಲೀಸ್ ಮಂಜುನಾಥ ನಿರ್ವಹಿಸಿದರು.
ಈ ಸಮಯದಲ್ಲಿ ಬಳ್ಳಾರಿ ನಗರ ಡಿವೈಎಸ್ಪಿ ಬಸವರಾಜ, ಮಹಿಳಾ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಂಗಾಧರ್, ಪಿ.ಎಸ್.ಐ ಆರೋಗ್ಯ ಸ್ವಾಮಿ, ಎ.ಎಸ್.ಐಗಳಾದ ಗೋಪಿ, ಅನ್ಸಾರ್, ವೆಂಕಟೇಶ್, ವೆಂಕಟೇಶ್ವರ ರಾವ್, ಅಸ್ಲಾಂ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಊರಿನ ಗ್ರಾಮಸ್ಥರು, ಕುಟುಂಬಸ್ಥರ ಭಾಗವಹಿಸಿದ್ದರು.