ಬಳ್ಳಾರಿ :ಗಣಿನಾಡು ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರದ ಟ್ರಾಫಿಕ್ ಪಿ.ಎಸ್.ಐ ಆಗಿ ಮೇ 31 ರಂದು ನಿವೃತ್ತಿ ಹೊಂದಿದ್ದ ಗೌಡ್ರ ಹನುಮಂತಪ್ಪ ಅವರಿಗೆ ಸೋಮವಾರ ಸಂಜೆ ಎಸ್.ಪಿ ಕಚೇರಿಯಲ್ಲಿ ಬಳ್ಳಾರಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ರಂಜಿತ್ ಕುಮಾರ್ ಬಂಡಾರು ಅವರು ಶುಭ ಕೋರಿ, ಸೇವಾ ಪ್ರಮಾಣಪತ್ರ ನೀಡಿ, ಸನ್ಮಾನ ಮಾಡಿ ಗೌರವಿಸಿದರು. ಈ ಸಮಯದಲ್ಲಿ ನಿವೃತ್ತ ಪಿ.ಎಸ್.ಐ ಹನುಮಂತಪ್ಪ.ಜಿ ಅವರ ಹಿರಿಯ ಮಗ ಗಿರೀಶ್ ಕುಮಾರ್.ಜಿ ಹಾಜರಿದ್ದರು.