ಇಂದು ಅಥವಾ ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಾಧ್ಯತೆ: ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ

Share and Enjoy !

Shares
Listen to this article

ಬೆಂಗಳೂರು: ಅಭೂತಪೂರ್ವ ಬಹುಮತದೊಂದಿಗೆ ಕಾಂಗ್ರೆಸ್​ ಅಧಿಕಾರಿಕ್ಕೆ ಬಂದಿದ್ದು, ಸಂಪೂರ್ಣ ಸಚಿವ ಸಂಪುಟ ರಚನೆ ಮಾಡಿದೆ. ಸಂಪುಟ ರಚನೆ ನಂತರ ಸಚಿವ ಸ್ಥಾನ ವಂಚಿತ ಶಾಸಕರು ಅಸಮಾಧಾನಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಜಿಲ್ಲಾ ಉಸ್ತುವಾರಿ ನೇಮಕಕ್ಕೆ ಕಾದು ಕುಳಿತಿದ್ದು, ಯಾವಾಗ ಹಂಚಿಯಾಗುತ್ತದೆ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ  ರಿವಿಲ್​ ಮಾಡಿದ್ದಾರೆ. ಇಂದು (ಜೂ.09) ಅಥವಾ ನಾಳೆ (ಜೂ.10) ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಾಧ್ಯತೆ ಇದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಕೆಲ ಜಿಲ್ಲೆಗಳಿಗೆ ಸಚಿವರು ಇಲ್ಲ, ಇದೆಲ್ಲವನ್ನೂ ಪರಿಶೀಲಿಸಬೇಕಾಗುತ್ತೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ ಯಾವುದೇ ಸಮಸ್ಯೆ ಆಗಲ್ಲ. 34 ಮಂದಿ ಸಚಿವರನ್ನ ಒಂದೇ ಬಾರಿಗೆ ನೇಮಕ ಮಾಡುತ್ತೇವೆ. ನಮ್ಮ ಪಕ್ಷದ ಎಷ್ಟು ಸಧೃಡವಾಗಿದೆ ಎಂದರು.

ಸರ್ಕಾರ ರಚನೆ ಆದ ಮೇಲೆ ಅಧಿಕೃತ ಕಚೇರಿ ಆರಂಭ ಮಾಡಿದ್ದೀನಿ. ಈಗಾಗಲೇ ಸಭೆ ಮಾಡಿ ಮುಂಗಾರಿಗೆ ತಯಾರಾಗಬೇಕಿದೆ. ಎಲ್ಲ 31 ಜಿಲ್ಲೆಗಳಲ್ಲಿ ತಯಾರಿ ಆಗಿದೆ. ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಹೊಸ ಕಾರ್ಯದರ್ಶಿ ಗಮನ ಹರಿಸುತ್ತಿದ್ದಾರೆ. ಬೆಳಗಾವಿ ವಿಭಾಗದಲ್ಲಿ ಅಧಿಕಾರಿಗಳ ಸಭೆ ಇದೆ. ಪ್ರಮುಖವಾಗಿ ರೈತರ ಸಮಸ್ಯೆಗಳ ಬಗ್ಗೆ ಜೆಡಿಗಳ ಜೊತೆ, ಇಲಾಖೆ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದ್ದಾರೆ. ಏನೆಲ್ಲ ಸಿದ್ದತೆ ಆಗಿದೆ ಎಂದು ಮಾಹಿತಿ ನೀಡಿದರು.

 

Share and Enjoy !

Shares