ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

Share and Enjoy !

Shares
Listen to this article

ಬೆಂಗಳೂರು: ಸಿಎಂ ಸಿದ್ದರಾಮಯ್ಯ  ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್‌ ಸರ್ಕಾರ, ಅಳೆದು ತೂಗಿ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರುಗಳನ್ನು ಶುಕ್ರವಾರ ನೇಮಕ ಮಾಡಿದೆ.

ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಣತೊಟ್ಟಿದ್ದು, ಹಲವು ಸಚಿವರು ತಮ್ಮ ತಮ್ಮ ಜಿಲ್ಲೆಯ ಮೇಲೆ ಕಣ್ಣೀಟ್ಟಿದ್ದರು. ಜಿಲ್ಲೆಗಳ ಉಸ್ತುವಾರಿ ಸ್ಥಾನಕ್ಕೆ ಪೈಪೋಟಿ ಶುರುವಾಗಿತ್ತು, ಅದರಲ್ಲೂ ಮುಖ್ಯವಾಗಿ ಒಂದೇ ಜಿಲ್ಲೆಯ ಇಬ್ಬರು ಸಚಿವರುಗಳ ನಡುವೆ ಭಾರೀ ಲಾಬಿಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ತಲೆನೋವಾಗಿತ್ತು. ಆದರೆ, ಇದೀಗ ಎಲ್ಲಾ ಗೊಂದಲಗಳನ್ನು ನಿವಾರಿಸಿ ಅಂತಿಮವಾಗಿ ಜಿಲ್ಲಾ ಉಸ್ತುವಾರಿಗಳನ್ನ ನೇಮಕ ಮಾಡಲಾಗಿದೆ.

ಬೆಂಗಳೂರು ನಗರ ಉಸ್ತುವಾರಿ ಸಚಿವ- ಡಿ.ಕೆ.ಶಿವಕುಮಾರ್​

 ತುಮಕೂರು ಜಿಲ್ಲಾ ಉಸ್ತುವಾರಿ-ಡಾ.ಜಿ.ಪರಮೇಶ್ವರ್​

 ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್​.ಕೆ.ಪಾಟೀಲ್

ಬೆಂಗಳೂರು ಗ್ರಾಮಾಂತರ-ಕೆ.ಹೆಚ್​.ಮುನಿಯಪ್ಪ

ರಾಮಲಿಂಗಾರೆಡ್ಡಿ-ರಾಮನಗರ

ಕೆ.ಜೆ.ಜಾರ್ಜ್​-ಚಿಕ್ಕಮಗಳೂರು

ಎಂ.ಬಿ.ಪಾಟೀಲ್​-ವಿಜಯಪುರ

ದಿನೇಶ್ ಗುಂಡೂರಾವ್​-ದಕ್ಷಿಣ ಕನ್ನಡ

ಹೆಚ್​.ಸಿ.ಮಹದೇವಪ್ಪ-ಮೈಸೂರು,

ಸತೀಶ್ ಜಾರಕಿಹೊಳಿ-ಬೆಳಗಾವ

ಪ್ರಿಯಾಂಕ್​ಖರ್ಗೆ-ಕಲಬುರಗಿ

ಶಿವಾನಂದಪಾಟೀಲ್-ಹಾವೇರಿ

ಜಮೀರ್​ಅಹ್ಮದಖಾನ್​​-ವಿಜಯನಗರ

ಶರಣಬಸಪ್ಪ ದರ್ಶನಾಪುರ-ಯಾದಗಿರಿ

ಈಶ್ವರ್ ಖಂಡ್ರೆ-ಬೀದರ್,

ಚಲುವರಾಯಸ್ವಾಮಿ-ಮಂಡ್ಯ

ಎಸ್​.ಎಸ್​.ಮಲ್ಲಿಕಾರ್ಜುನ್​-ದಾವಣಗೆರೆ

ಸಂತೋಷ್ ಲಾಡ್-ಧಾರವಾಡ

ಶರಣಪ್ರಕಾಶ್ ಪಾಟೀಲ್​-ರಾಯಚೂರು

ಆರ್​.ಬಿ.ತಿಮ್ಮಾಪುರ-ಬಾಗಲಕೋಟೆ

ಕೆ.ವೆಂಕಟೇಶ್​-ಚಾಮರಾಜನಗರ

ಕೊಪ್ಪಳ-ಶಿವರಾಜ್​ ತಂಗಡಗಿ

ಡಿ.ಸುಧಾಕರ್​-ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ

ಬಿ.ನಾಗೇಂದ್ರ-ಬಳ್ಳಾರಿ

ಕೆ.ಎನ್​.ರಾಜಣ್ಣ-ಹಾಸನ

ಭೈರತಿ ಸುರೇಶ್​-ಕೋಲಾರ

ಲಕ್ಷ್ಮೀ ಹೆಬ್ಬಾಳ್ಕರ್​-ಉಡುಪಿ

ಮಂಕಾಳ್ ವೈದ್ಯ-ಉತ್ತರ ಕನ್ನಡ

ಮಧು ಬಂಗಾರಪ್ಪ-ಶಿವಮೊಗ್ಗ

ಡಾ.ಎಂ.ಸಿ.ಸುಧಾಕರ್-ಚಿಕ್ಕಬಳ್ಳಾಪುರ

ಎನ್​.ಎಸ್​.ಬೋಸರಾಜು-ಕೊಡಗು ನೇಮಕ ಮಾಡಿದ್ದಾರೆ.

 

Share and Enjoy !

Shares