ಮೆಂಥೋಪ್ಲಸ್ ಡಬ್ಬಿ ನುಂಗಿ ಉಸಿರುಗಟ್ಟಿ ಮಗು ಸಾವು.

Share and Enjoy !

Shares
Listen to this article

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಿನ್ನೆ ಮಗುವೊಂದು ಮೆಂಥೋಪ್ಲಸ್  ಡಬ್ಬಿ  ನುಂಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ನಡೆದಿದೆ.

ಕಂಪ್ಲಿ ಪಟ್ಟಣದ 5ನೇ ವಾರ್ಡ್ ಇಂದಿರಾನಗರದ ಮುತ್ಯಾಲ ರಾಘವೇಂದ್ರ ಮತ್ತು  ತುಳಸಿ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ ಮಗು ಜನಿಸಿತ್ತು. ಪ್ರಿಯದರ್ಶಿನಿ ಎಂದು ಹೆಸರಿಟ್ಟಿದ್ದರು.

ಒಂಭತ್ತು ತಿಂಗಳ ಮಗು ನಿನ್ನೆ ಆಟವಾಡುತ್ತ ಮನೆಯಲ್ಲಿನ ಮೆಂಥೋಪ್ಲಸ್ ಡಬ್ಬಿ ನುಂಗಿದೆ

ನಂತರ ಮಗುವಿಗೆ ಉಸಿರಾಟ ತೊಂದರೆ  ಹೆಚ್ಚಿದಾಗ ಖಾಸಗಿ ವೈದ್ಯರ ಬಳಿ ಪೋಷಕರು ಕರೆದುಕೊಂಡು ಹೋಗಿದ್ದಾರೆ.

ವೈದ್ಯರು ಪರೀಕ್ಷಿಸಿದಾಗ ಮಗು ಮಾರ್ಗ ಮಧ್ಯೆಯೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.

Share and Enjoy !

Shares