ನಮ್ಮಿಂದ ಮತ್ತೊಂದು ಜೀವ ಉಳಿಯುತ್ತದೆ ಎನ್ನುವುದಾದರೆ ಅದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ :ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ ಮಿಂಚು

Share and Enjoy !

Shares
Listen to this article
ಬಳ್ಳಾರಿ:ನಗರದ ಸಂಗನಕಲ್ಲು ರಸ್ತೆ ನಳಂದ ಶಾಲಾ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ನಗರ ಶಾಸಕ ನರಭರತ್ ರೆಡ್ಡಿ ರವರ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಈ  ಕಾರ್ಯಕ್ರಮಕ್ಕೆ 35ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸಲು ಮಿಂಚು ರವರು ಸುಮಾರು ಐವತ್ತಕ್ಕೂ ಹೆಚ್ಚು ಬೆಂಬಲಿಗರನ್ನು ಕರೆತಂದು ರಕ್ತದಾನ ಮಾಡಿಸಿದರು.
ರಕ್ತದಾನ ಮಹಾದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಪಘಾತಕ್ಕೀಡಾದ ಸಂದರ್ಭ ರಕ್ತದ ಅನಿವಾರ್ಯತೆ ಹೆಚ್ಚಾಗಿರುತ್ತದೆ. ಆಗ ರಕ್ತ ನೀಡುವವನು ನಿಜಕ್ಕೂ ದೇವರಾಗಿ ಕಾಣುತ್ತಾನೆ. ನಾವು ಯಾವುದೇ ದಾನ ಮಾಡದಿದ್ದರೂ ಕಷ್ಟ ಕಾಲದಲ್ಲಿ ರಕ್ತದಾನ ಮಾಡಿ ಪುಣ್ಯ ಕಟ್ಟಿಕೊಳ್ಳಬಹುದಾಗಿದೆ. ನಮ್ಮಿಂದ ಮತ್ತೊಂದು ಜೀವ ಉಳಿಯುತ್ತದೆ ಎನ್ನುವುದಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದು ಪಾಲಿಕೆ ಸದಸ್ಯ ಶ್ರೀನಿವಾಸಲು ಮಿಂಚು ಹೇಳಿದರು.

Share and Enjoy !

Shares